ಸಾವಿನಲ್ಲೂ ಒಂದಾದ ನಾದಿನಿ- ಅತ್ತಿಗೆ

ವೈ.ಡಿ.ಸಾವಿತ್ರಮ್ಮ
ವೈ.ಡಿ.ಸಾವಿತ್ರಮ್ಮ
Published on

ಅರಸೀಕೆರೆ ಗ್ರಾಮಾಂತರ: ಹೃದಯಾಘಾತದಿಂದ ಮೃತಪಟ್ಟ ನಾದಿನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅತ್ತಿಗೆಯೂ ಮೃತಪಟ್ಟಿದ್ದಾರೆ.

ಗಂಗಾಮತಸ್ಥ ಸಂಘದ ತಾಲೂಕು ಅಧ್ಯಕ್ಷ ಕೇಶವಮೂರ್ತಿ ಅವರ ಕಿರಿಯ ಸಹೋದರಿ ವೈ.ಡಿ.ಸಾವಿತ್ರಮ್ಮ (64) ಭಾನುವಾರ ಮಧ್ಯಾಹ್ನ ತಾಲೂಕಿನ ಯಳವಾರೆ ಗ್ರಾಮದಲ್ಲಿರುವ ಮಗಳ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ವಿಷಯ ತಿಳಿದ ಕೇಶವಮೂರ್ತಿ ಅವರ ಪತ್ನಿ ನಾಗರತ್ನಮ್ಮ (67) ಜಾವಗಲ್ ಗ್ರಾಮದಿಂದ ಯಳವಾರೆ ಗ್ರಾಮಕ್ಕೆ ತೆರಳುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಆ ಮೂಲಕ ಸಾವಿನಲ್ಲೂ ನಾದಿನಿ ಹಾಗೂ ಅತ್ತಿಗೆ ಒಂದಾಗಿದ್ದು, ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿತು. ಸಾವಿತ್ರಮ್ಮ ಅವರಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದು, ಜಾವಗಲ್ ಗ್ರಾಮದಲ್ಲಿ ಸೋಮವಾರ ಅಂತ್ಯಕ್ರಿಯೆ ನಡೆಯಿತು. ಅಂತೆಯೇ ನಾಗರತ್ನಮ್ಮ ಅವರಿಗೆ ಪತಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಅಂತ್ಯಕ್ರಿಯೆಯು ಯಳವಾರೆ ಗ್ರಾಮದಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net