ಮನುಷ್ಯನ ಸ್ವಾರ್ಥದಿಂದ ಪ್ರಕೃತಿ ನಾಶ

UDP-30-1-Nadige
Published on


ಉಡುಪಿ: ಬದುಕು ಸಶೇಷವಲ್ಲ, ಬದುಕುವುದೂ ವಿಶೇಷವಲ್ಲ. ಆದರೆ ಬದುಕಿ ಏನಾದರೂ ಸಾಧಿಸುವುದೇ ವಿಶೇಷ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ವಿರುದ್ಧ ಸಾಗುತ್ತಿದ್ದಾನೆ. ಆ ಮೂಲಕ ಎಲ್ಲ ವ್ನಿಗಳಿಗೂ ಕಾರಣನಾಗುತ್ತಿದ್ದಾನೆ ಎಂದು ಪರಿಸರ ತಜ್ಞ ದಿನೇಶ್​ ಹೊಳ್ಳ ಅಸಮಾಧಾನ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ವಿವಿಧ ಸಂಟನೆಗಳ ಸಹಭಾಗಿತ್ವದಲ್ಲಿ ಗುರುವಾರ ಹಳೆಯ ಪಾದರೆ ಸಂಗ್ರಹಿಸುವ ಮೂರು ದಿನಗಳ "ನಡಿಗೆ' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಶ್ಚಿಮಟ್ಟಕ್ಕೆ ಚಾರಣಕ್ಕಾಗಿ ಬರುವ ಗಂಡುಗಲಿಗಳು, ಅಲ್ಲಿ ಗುಂಡುಗಲಿಗಳಾಗಿ ವನ್ಯಜಿವಿಗಳ ಜೀವಕ್ಕೆ ತೊಂದರೆ ಕೊಡುತ್ತಿದ್ದಾರೆ. ಜಿಂಕೆಯೊಂದು ಬಾಯಲ್ಲಿ ನೊರೆ ಬಂದು ಸಾವನ್ನಪ್ಪಿತ್ತು. ಅದರ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರ ಹೊಟ್ಟೆಯೊಳಗೆ 6 ಕೆಜಿ ಪ್ಲಾಸ್ಟಿಕ್​, ಎರಡು ತುಂಡು ಚಪ್ಪಲಿ ಹಾಗೂ ಎರಡು ಕಬ್ಬಿಣದ ಮೊಳೆ ಇತ್ತು. ಇದು ಜಿಂಕೆಯ ಸಾವಿಗೆ ಚಾರಣಿಗರು ಕೊಟ್ಟ ಕೊಡುಗೆ. ಹಳೆಯ ಪಾದರೆ ಸಂಗ್ರಹಿಸುವ ಈ ಅಭಿಯಾನ ಪರಿಸರ ಸಂರಕ್ಷಣೆಯ ಕಾಳಜಿ ಹೊಂದಿದೆ ಎಂದರು.

ವಿಶಿಷ್ಟ ಸೇವೆ:
ಕಾರ್ಕಳದ ಕ್ರಿಯೇಟಿವ್​ ಶಿಕ್ಷಣ ಸಂಸ್ಥೆಯ ಸಹಸಂಸ್ಥಾಪಕ ಅಶ್ವತ್ಥ ಎಸ್​.ಎಲ್​. ಮಾತನಾಡಿ, ನಡಿಗೆ ಅಭಿಯಾನ ಅತ್ಯಂತ ವಿಶಿಷ್ಟ ಹಾಗೂ ಅರ್ಥಪೂರ್ಣ ಕಾರ್ಯಕ್ರಮ. ನಾವು ಬಳಸಿ ಎಸೆಯುವ ಪಾದರೆ ಸಂಗ್ರಹಿಸುವ ಯೋಜನೆ ಮೂಲಕ ಬಡ ವಿದ್ಯಾರ್ಥಿಗಳಿಗೆ ಹೊಸ ಚಪ್ಪಲಿ ನೀಡುವ ಈ ಸೇವೆ ಮಾದರಿಯಾಗಿದೆ ಎಂದರು.

ಸಹಕಾರ ಅಗತ್ಯ
ಸಂಸತಿ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷ ವಿಶ್ವನಾಥ ಶೆಣೈ ಮಾತನಾಡಿ, ಹಳೆಯ ಪಾದರೆ ನೀಡುವುದರಿಂದ ಬಡ ಮಕ್ಕಳಿಗೆ ಹೊಸ ಪಾದರೆ ಸಿಗಲಿದ್ದು, ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.

ಕಾರ್ಯಕ್ರಮ ಸಂಯೋಜಕ ಅವಿನಾಶ್ ಕಾಮತ , ಅಭಿಯಾನದ ಸಂಯೋಜಕಿ ಅಭಿಗೇಲ್​ ಅಂಚನ್​, ಪ್ರಾಂಶುಪಾಲ ಡಾ. ಲಕ್ಷ್ಮಿ ನಾರಾಯಣ ಕಾರಂತ, ಸಮಾಜಸೇವಕ ಅನ್ಸಾರ್​ ಅಹಮ್ಮದ್​, ಸಂಗೀತ ವಿಶಾರದ ಅಡಾಲ್ಫ್​ ಶೆರ್ವಿನ್​ ಅಮನ್ನಾ, ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಡಾ.ಸುಲತಾ ಭಂಡಾರಿ ಉಪತಸ್ಥಿತರಿದ್ದರು. ಸುಚಿತ್​ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net