ನಾಡಿಗೆ ಹಾನಗಲ್ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ

5
ಮುನವಳ್ಳಿ ಸೋಮಶೇಖರಮಠದಲ್ಲಿ ಮುನವಳ್ಳಿ ಸಿರಿ ಗ್ರಂಥವನ್ನು ಅಮೀನಗಡ ಶಂಕರರಾಜೇಂದ್ರ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಮುರುಘೇಂದ್ರ ಶ್ರೀಗಳು, ಗಣಪತಿ ಮಹಾರಾಜರು, ರಮೇಶ ಮುರಂಕರ, ವಿರೇಶ ಬ್ಯಾಹಟ್ಟಿ ಇತರರು ಇದ್ದರು.
Published on

ಮುನವಳ್ಳಿ: ಪಟ್ಟಣದ ಸೋಮಶೇಖರಮಠದಲ್ಲಿ ಬಸವಲಿಂಗ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಪ್ರಯುಕ್ತ ಸೋಮವಾರ ಪ್ರವಚನ ಮಂಗಲ, ಮುನವಳ್ಳಿ ಸಿರಿ ಗ್ರಂಥ ಲೋಕಾರ್ಪಣೆ ಹಾಗೂ ಮಠದ ಪೀಠಾಧಿಪತಿ ಮುರುಘೇಂದ್ರ ಶ್ರೀಗಳ ಪಟ್ಟಾಧಿಕಾರದ ರಜತೋತ್ಸವ ಪ್ರಯುಕ್ತ ಬೆಳ್ಳಿ ಕಿರೀಟಧಾರಣೆ ಹಾಗೂ ಗುರುವಂದನೆ ಜರುಗಿತು.

ಅಡವೀಶ ದೇವರು ಮಾತನಾಡಿ, ಸಮ ಸಮಾಜ ನಿರ್ಮಿಸಲು, ಅಂಧರ ಬಾಳಿಗೆ ಸಂಗೀತ ಶಿಕ್ಷಣ ನೀಡಲು ಲಿಂ. ಹಾನಗಲ್ ಕುಮಾರ ಶಿವಯೋಗಿಗಳ ಕೊಡುಗೆ ಅಪಾರ ಎಂದರು. ಯರಗಟ್ಟಿ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಮುರುಘೇಂದ್ರ ಶ್ರೀಗಳಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿದರು.

ಸಾಹಿತಿ ರಮೇಶ ಮುರಂಕರ ರಚಿಸಿದ ಮುನವಳ್ಳಿ ಸಿರಿ ಗ್ರಂಥವನ್ನು ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ತೊರಗಲ್ಲದ ಚನ್ನಮಲ್ಲ ಶಿವಾಚಾರ್ಯರು, ಘಟಪ್ರಭಾದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಜಂಬಗಿ ಅಡವಿಸಿದೇಶ್ವರ ಶಿವಾಚಾರ್ಯ, ಅಂಕಲಗಿ ಅಮರಸಿದ್ದೇಶ್ವರ ಸ್ವಾಮೀಜಿ, ತಹಸೀಲ್ದಾರ್ ಎಂ.ಎನ್.ಹೆಗ್ಗಣ್ಣವರ ಇತರರು ಇದ್ದರು. ಗ್ರಂಥದಾಸೋಹಿ ವಿರೇಶ ಬ್ಯಾಹಟ್ಟಿ, ನಾಗರಾಜ ನೇಗಿನಹಾಳ, ವೀರಣ್ಣ ಕಮ್ಮಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net