ಬದುಕಿಗಾಗಿ ಮೋಕ್ಷ ಇಂಥಹ ಕೃತಿಗಳು ನಾಡಿಗೆ ಬೇಕು

rbk 6-3 pustka
ರಬಕವಿಯಲ್ಲಿ ನಡೆಯುತ್ತಿರುವ ಬ್ರಹ್ಮಾನಂದ ಉತ್ಸವದಲ್ಲಿ ಗುರುಸಿದ್ಧೇಶ್ವರ ಸ್ವಾಮೀಜಿ ರಚಿಸಿದ ಚಂದಮಮ ಕೃತಿಯನ್ನು ಮರೆಗುದ್ದಿಯ ನಿರುಪಾಧೀಶ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಡಾ. ಜೀನದತ್ತ ಹಡಗಲಿ, ಗುರುಸಿದ್ಧೇಶ್ವರ ಶ್ರೀಗಳು ಇದ್ದರು.
Published on

ರಬಕವಿ/ಬನಹಟ್ಟಿ: ನಮ್ಮನ್ನು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು. ಬೇರೆಯವರಿಗೆ ಪರೋಪಕಾರ ಮಾಡುವ ಮನಸ್ಸನ್ನು ನಮ್ಮದಾಗಿಸಿಕೊಳ್ಳಬೇಕು. ನಾವೆಲ್ಲರೂ ಮನುಷ್ಯರಂತೆ ಬದುಕಿದಾಗ ಮಾತ್ರ ಮೋಕ್ಷ ಪಡೆದುಕೊಳ್ಳಲು ಸಾಧ್ಯ ಎಂಬ ಅಂಶಗಳು ಚಂದಮಮ ಕೃತಿಯಲ್ಲಿವೆ ಎಂದು ಧಾರವಾಡದ ಡಾ. ಜೀನದತ್ತ ಹಡಗಲಿ ತಿಳಿಸಿದರು.

ಭಾನುವಾರ ರಬಕವಿ ಬ್ರಹ್ಮಾನಂದ ಉತ್ಸವದಲ್ಲಿ ಆಶ್ರಮದ ಗುರುಸಿದ್ಧೇಶ್ವರರು ರಚಿಸಿದ ‘ಚಂದಮಮ’ ನಿಜಗುಣ ಶಿವಯೋಗಿಗಳ ಕೈವಲ್ಯ ಪದ್ಧತಿಯ ನೀತಿ ಕ್ರಿಯಾಚರ್ಯ ಸ್ಥಲದ ಆಚರಣೆಯ ನಿರೂಪಣಾ ಪದ್ಯ ಕೃತಿ ಕುರಿತು ಅವರು ಮಾತನಾಡಿದರು.

ಮನಸ್ಸು ವಿಕಾರಗೊಳ್ಳಲು ನಮ್ಮ ಇಂದ್ರೀಯಗಳೇ ಕಾರಣವಾಗಿವೆ. ಇಂದ್ರೀಯಗಳನ್ನು ಮತ್ತು ಅರಿಷಡ್ವರ್ಗಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ನಮ್ಮ ಮನಸ್ಸಿನಿಂದ ಸಾಧ್ಯ ಎಂದರು.

ಸುಣಧೋಳಿಯ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಮಹಾತ್ಮರ ಸ್ಮರಿಸುವುದರಿಂದ ಜೀವನವು ಪಾವನವಾಗುತ್ತದೆ. ಗುರು ನೀಡಿದ ವಿದ್ಯೆ ಮತ್ತು ಪ್ರಸಾದ ಶ್ರೇಷ್ಠವಾದುದು ಎಂದರು.

ಹಂಚಿನಾಳದ ಭಕ್ತಿ ಯೋಗಾಶ್ರಮದ ಮಹೇಶ್ವರಾನಂದ ಸ್ವಾಮೀಜಿ ಮಾತನಾಡಿ, ಭಾರತದ ದೇವಾಲಯಗಳು ಮತ್ತು ಮಠಗಳು ಎಲ್ಲರನ್ನು ಒಂದುಗೂಡಿಸಿವೆ. ಉತ್ತರ ಕರ್ನಾಟಕದಲ್ಲಿ ಶಿವಾನಂದ ಸ್ವಾಮೀಜಿ ಮತ್ತು ಸಿದ್ಧಾರೂಢರು ಕೆಳಗೆ ಬಿದ್ದವರನ್ನು ಮೇಲಕ್ಕೆತ್ತಿದ ಮಹಾನುಭಾವರು. ಮಕ್ಕಳಿಗೆ ಸಂಸ್ಕಾರದ ಜತೆಗೆ ಶಿಕ್ಷಣ ನೀಡಬೇಕಿದೆ ಎಂದರು.

ಮರೆಗುದ್ದಿಯ ನಿರುಪಾಧೀಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರನ್ನ ಬೆಳಗಲಿಯ ಸಿದ್ಧರಾಮ ಶಿವಯೋಗಿ ಸ್ವಾಮೀಜಿ ಅಂಕಲಗಿಯ ಅಡವಿಸಿದ್ಧೇಶ್ವರರ ಕುರಿತು ಪ್ರವಚನ ನೀಡಿದರು.

ಗುರುಸಿದ್ಧೇಶ್ವರ ಸ್ವಾಮೀಜಿ, ವಿಶ್ವಜ ಕಾಡದೇವರ, ಪಶು ವೈದ್ಯ ಪ್ರಭು ಬಿರಾದಾರ ಪಾಟೀಲ, ಗಿರೀಶ ಮುತ್ತೂರ, ಮಹಾದೇವ ಕವಿಶೆಟ್ಟಿ ಮಾತನಾಡಿದರು.

ಮಾರುತಿ ಗಂಥಡೆ, ಈರಣ್ಣ ಹಲಗತ್ತಿ, ದುಂಡಪ್ಪ ದೂಪದಾಳ, ಶಂಕರ ಜಾಲಿಗಿಡದ, ಸದಾಶಿವ ನಾಯಕ, ಶ್ರೀನಿವಾಸ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net