ನಾಡಿಗೆ ಆರೋಗ್ಯವಂತ ಯುವಕರ ಅಗತ್ಯ

1 vikram 3
Published on

ಧಾರವಾಡ: ಆರೋಗ್ಯವಂತ ನಾಡು ಕಟ್ಟು ಆರೋಗ್ಯವಂತ ಯುವಕರ ಅಗತ್ಯವಿದೆ. ಅಂತಹ ಯುವಕರನ್ನು ಸೃಷ್ಟಿಸುವ ಸಂಸ್ಥೆ ಸುವರ್ಣ ಸಂಸ್ಥೆ ಆಗಲಿ ಎಂದು ಚಂದನ ವಾಹಿನಿ ನಿರ್ದೇಶಕಿ ಡಾ. ನಿರ್ಮಲಾ ಯಲಿಗಾರ ಶುಭ ಹಾರೈಸಿದರು.
ನಗರದ ಸುವರ್ಣ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಶೋಭಾ ನಾಗನೂರ, ಸಂಸ್ಥೆ ಕಾರ್ಯದರ್ಶಿ ಸವಿತಾ ಅಮರಶೆಟ್ಟಿ ಮಾತನಾಡಿ, ಕನ್ನಡ ನಾಡು ನುಡಿ ಬಗ್ಗೆ ತಿಳಿಸಿದ ಅವರು, ಹಸಿರನ್ನು ಉಳಿಸಿ ಬೆಳೆಸಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂಸ್ಥೆ ಅಧ್ಯಕ್ಷ ವಿಶ್ವನಾಥ ಅಮರಶೆಟ್ಟಿ, ಸರ್ವಮಂಗಳಾ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು. ಕಾಲೇಜಿನ ಪ್ರಾಚಾರ್ಯೆ ಪ್ರೊ. ಸಾವಿತ್ರಿ ಬೆಣ್ಣಿ ಸ್ವಾಗತಿಸಿದರು. ಪ್ರೊ. ಎನ್.ಎಸ್. ಸಾಲಿಮಠ ನಿರೂಪಿಸಿದರು. ಪ್ರೊ. ಸವಿತಾ ಬೆಂತೂರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net