ಸಂಗೀತ ನಿರ್ದೇಶಕ ವಾಸುದೇವ ಭಟ್ ನಿಧನ

IMG-20220113-WA0010
Published on

ಉಡುಪಿ: ನಾದ ವೈಭವಂ ಕಲಾ ಸಂಘಟನೆ ಸ್ಥಾಪಕ, ಸಂಗೀತ ನಿರ್ದೇಶಕ ವಾಸುದೇವ ಭಟ್ (84) ಗುರುವಾರ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ನಾದ ವೈಭವಂ ಎಂಬ ಕಲಾ ಸಂಘಟನೆಯನ್ನು ಹುಟ್ಟು ಹಾಕಿ, ಸಂಗೀತ, ನೃತ್ಯ ರೂಪಕ ಹಾಗೂ ಚಲನಚಿತ್ರಗಳನ್ನು ರಚಿಸಿ, ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಅವರು ಅನೇಕ  ಗಾಯಕರಿಗೆ ಗುರುಗಳಾಗಿದ್ದರು.

1994 ರಲ್ಲಿ ಯೇಸು ಸ್ವಾಮಿಯ ಜೀವನಾಧಾರಿತ  ಭುವನ ಜ್ಯೋತಿ ಎಂಬ ಚಲನಚಿತ್ರ ಐದು ಭಾಷೆಗಳಲ್ಲಿ ರಚಿಸಿದ್ದರು. ಹಲವು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದರು. ಅಪಾರ ಸಂಗೀತ ಕ್ಷೇತ್ರದ ಶಿಷ್ಯ ವೃಂದನ್ನು ಆಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net