

ಕುಮಟಾ: ಇಲ್ಲಿನ ರೋಟರಿ ಕ್ಲಬ್ನ ಸಹಸಂಘಟನೆಯಾದ ರೋಟರಿ ಸರ್ವೀಸ್ ಸೊಸೈಟಿಯವರು ನಿರ್ವಹಿಸುತ್ತಿರುವ ನಾದಶ್ರೀ ಕಲಾ ಕೇಂದ್ರದ ವಾರ್ಷಿಕೋತ್ಸವವು ಭರತನಾಟ್ಯ, ರೂಪಕ, ಸಂಗೀತ, ಗಾಯ, ವಾದನ ಮುಂತಾದ ಪ್ರಕಾರಗಳ ವೈವಿಧ್ಯಮಯ ಪ್ರದರ್ಶನದಿಂದ ಕಲಾರಸಿಕರ ಮನತಣಿಸಿತು.
ರೇವತಿ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಅಧ್ಯಕ್ಷ ಅತುಲ ಕಾಮತ ಹಾಗೂ ರೋಟರಿ ಸರ್ವೀಸ್ ಸೊಸೈಟಿ ಅಧ್ಯಕ್ಷ ಸತೀಶ ನಾಯ್ಕ ಕಾರ್ಯಕ್ರಮದ ಕುರಿತು ವಿವರಿಸಿದರು.
ಬಳಿಕ ನಾದಶ್ರೀ ಕಲಾ ಕೇಂದ್ರದ ವಾರ್ಷಿಕೋತ್ಸವ ವಿಜೃಂಭಣೆಯಿಂದ ಆಚರಿಸಲಾಗಿದ್ದು, ಹಲವಾರು ಖ್ಯಾತ ಕಲಾವಿದರು ತಮ್ಮ ಕಲಾಪ್ರದರ್ಶನ ನೀಡಿದರು. ಕಲಾಕೇಂದ್ರದ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳ ಪಾಲಕರು ಮಾತ್ರವಲ್ಲದೆ, ರೋಟರಿ ಸದಸ್ಯರು, ಗಣ್ಯರು, ಸಾರ್ವಜನಿಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ವತಿಯಿಂದ ನಾದಶ್ರೀ ಕಲಾಕೇಂದ್ರದ ಶಿಕ್ಷಕರು ಹಾಗೂ ಸಿಬ್ಬಂದಿಯನ್ನು ಗೌರವಿಸಲಾಯಿತು. ರೋಟರಿ ಖಜಾಂಚಿ ಪವನ ಶೆಟ್ಟಿ, ರೋಟರಿ ಸರ್ವೀಸ್ ಸೊಸೈಟಿ ಕಾರ್ಯದರ್ಶಿ ಕಿರಣ ನಾಯಕ, ಜಿ.ಎಸ್. ಹೆಗಡೆ ಇತರರಿದ್ದರು.