ದೂರದೃಷ್ಟಿ ಕಲ್ಪನೆ ಹೊಂದಿದ್ದ ನಾಡಪ್ರಭು

27 vpt 1.1
ವಿರಾಜಪೇಟೆ ತಾಲೂಕು ಆಡಳಿತ ವತಿಯಿಂದ ಪುರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ತಹಸೀಲ್ದಾರ್ ರಾಮಚಂದ್ರ, ಚಂದ್ರಕುಮಾರ್, ವಿ.ಪಿ.ಡಾಲು, ನಾಗರಾಜು , ಸುರೇಶ್, ಡಿ.ಪಿ.ರಾಜೇಶ್ ಪದ್ಮನಾಭ, ಕೆ.ಅಬ್ದುಲ್ ಸಲಾಂ ಇದ್ದರು.
Published on

ವಿರಾಜಪೇಟೆ: ರಾಜಧಾನಿ ಬೆಂಗಳೂರನ್ನು ದೂರದೃಷ್ಟಿ ಕಲ್ಪನೆಯೊಂದಿಗೆ ನಿರ್ಮಾಣ ಮಾಡಿ ಜಗತ್ತಿಗೆ ಬೆಂಗಳೂರು ನಗರವನ್ನು ಪರಿಚಯಿಸಿದ ಕೀರ್ತಿ ಕೆಂಪೇಗೌಡರೀಗೆ ಸಲ್ಲಬೇಕು ಎಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ವಿರಾಜಪೇಟೆ ವತಿಯಿಂದ ಪುರಸಭಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

16ನೇ ಶತಮಾನದಲ್ಲಿ ಯಲಹಂಕ ವಿಜಯನಗರದ ಪಾಳಯದಲ್ಲಿ ಹುಟ್ಟಿ ತಮ್ಮ ದೂರದೃಷ್ಟಿ ದಕ್ಷ ಆಡಳಿತ ಮತ್ತು ದಾರ್ಶನಿಕ ಮನೋಭಾವ ಹೊಂದಿದ್ದ ಫಲವಾಗಿ ಬೆಂಗಳೂರು ಜಗತ್ತಿನ ಪ್ರಮುಖ ನಗರಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. ಕೆಂಪೇಗೌಡರು ಅಂದಿನ ಕಾಲಘಟ್ಟದಲ್ಲಿ ಯಾವುದೇ ನದಿ ತೊರೆಗಳು ಇಲ್ಲದ ಬೆಂಗಳೂರು ನಗರದಲ್ಲಿ ಕರೆಗಳನ್ನು ತೋಡಿ ಕುಡಿಯುವ ನೀರು ಯೋಜನೆ, ಕೃಷಿ ಮತ್ತು ನಗರ ಅಭಿವೃದ್ಧಿಯನ್ನು ಮಾಡಿರುವುದರಿಂದ ಧೀಮಂತ ಎನಿಸಿಕೊಂಡರು. ಇತಿಹಾಸಗಳನ್ನು ತಿರುಚುವುದು ಇಂದಿನ ಯುಗದಲ್ಲಿ ಸಾಮಾನ್ಯವಾಗಿದೆ. ಅದರೆ ಇತಿಹಾಸದ ಪುಟಗಳಲ್ಲಿ ಆಡಳಿತ ನಡೆಸಿದವರ, ಹೆಸರು. ಅವರು ಮಾಡಿರುವ ಸಮಾಜಮುಖಿ ಕಾರ್ಯಗಳು ಇಂದಿಗೂ ಅಜರಾಮರವಾಗಿ ಉಳಿದುಕೊಂಡಿದೆ ಎಂದರು.

ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಸಂಸ್ಕೃತರಾದ ಕೆಂಪೇಗೌಡರು ಧುರೀಣರಾಗಿ ಕಲೆ, ಕೃಷಿ ಮತ್ತು ನಗರಾಭಿವೃದ್ಧಿ ಹೀಗೆ ಹಲವಾರು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿ ಬೆಂಗಳೂರು ನಗರವನ್ನು ಸೃಷ್ಟಿ ಮಾಡಿದರು. ದೂರದೃಷ್ಟಿಯ ಫಲವಾಗಿ ಇಂದು ಬೆಂಗಳೂರು ಐ.ಟಿ., ಬಿ.ಟಿ, ಬೃಹತ್ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ. ದೇಶದಲ್ಲಿ ಉತ್ತಮ ನಗರ ಎಂದು ಹೆಸರು ಗಳಿಸಿದೆ. ಕೆಂಪೇಗೌಡರ ಜಯಂತಿ ಆಚರಣೆಯ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹಂತದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿ ವಿಧ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂದು ಹೇಳಿದರು.

ಜಯಂತ್ಯುತ್ಸವ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಭಾಷಣ, ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಮತ್ತು ಚಿತ್ರಕಲೆ ಸ್ಪರ್ಧೆ ಗಳಲ್ಲಿ ಬಹುಮಾನ ಗಳಿಸಿದ ವಿಧ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯ ಕನ್ನಡ ಶಿಕ್ಷಕರಾದ ಗಂಗಾಧರ್ ಉಪನ್ಯಾಸ ನೀಡಿದರು.

ತಹಸೀಲ್ದಾರ್ ರಾಮಚಂದ್ರ, ಪುರಸಭೆ ಮುಖ್ಯಧಿಕಾರಿ ಎ.ಚಂದ್ರಕುಮಾರ್, ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿ.ಪಿ.ಡಾಲು, ಜಿಲ್ಲಾ ಒಕ್ಕಲಿಗರ ಸಮಿತಿಯ ನಿರ್ದೇಶಕ ನಾಗರಾಜು, ಉಪಾಧ್ಯಕ್ಷ ಸುರೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಪಿ ರಾಜೇಶ್ ಪದ್ಮನಾಭ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಆರ್.ಕೆ.ಅಬ್ದುಲ್ ಸಲಾಂ. ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಪ್ರಮುಖರಾದ ಸಿ.ಎಂ.ನಾಸಿರ್ ಮತ್ತು ಪುರಸಭೆಯ ಚುನಾಯಿತ ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಕಚೇರಿ ಸಿಬ್ಬಂದಿ, ವಿವಿಧ ಇಲಾಖೆ ತಾಲೂಕು ಮಟ್ಟದ ಅಧಿಕಾರಿಗಳು, ಶಾಲೆಯ ವಿಧ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net