ನಾದನಮನ ಸಂಗೀತೋತ್ಸವ 22ರಿಂದ

19 Dwd 7 M.K.Hegde
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಬಲಾ ಕಲಾವಿದ ಪಂ. ಗಜಾನನ ಹೆಗಡೆ ಗಿಳಿಗುಂಡಿ ಅವರ ಸ್ಮರಣೆ ಅಂಗವಾಗಿ ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನ ವತಿಯಿಂದ ಡಿ. 22 ಮತ್ತು 25ರಂದು ನಗರದಲ್ಲಿ ನಾದನಮನ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನದ ಗೌರವ ಅಧ್ಯಕ್ಷ ಎಂ.ಕೆ. ಹೆಗಡೆ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 22ರಂದು ಸೃಜನಾ ರಂಗಮ0ದಿರದಲ್ಲಿ ಬೆಳಗ್ಗೆ 9.30ರಿಂದ ರಾತ್ರಿ 8.30ರವರೆಗೆ ಸಂಗೀತೋತ್ಸವ ಜರುಗಲಿದೆ. ಬೆಳಗ್ಗೆ 9.30ಕ್ಕೆ ಧಾರವಾಡದ ಗುರುಪ್ರಸಾದ ಹೆಗಡೆ ಸಾರಂಗಿ ವಾದನ, 10.30ಕ್ಕೆ ಪ್ರತಿಭಾ ಹೆಗಡೆ ಮೂಲಿಮನಿ, 11.45ಕ್ಕೆ ಮುಂಬೈನ ರಾಮ ದೇಶಪಾಂಡೆ, ಮಧ್ಯಾಹ್ನ 2.30ಕ್ಕೆ ಧಾರವಾಡದ ಪಂಚಮ ಉಪಾಧ್ಯಾಯ, 3.30ಕ್ಕೆ ಬೆಂಗಳೂರಿನ ಗಾಯಕಿ ಪೂರ್ಣಿಮಾ ಭಟ್ ಗಾಯನ ಪ್ರಸ್ತುತಪಡಿಸುವರು. ಸಂಜೆ 5.40 ಗಂಟೆಗೆ ಪ್ರವೀಣ ಗೋಡಖಿಂಡಿ ಮತ್ತು ಷಡ್ಜ್ ಗೋಡಖಿಂಡಿ ಅವರಿಂದ ಬಾನ್ಸುರಿ ವಾದನ ಜರುಗಲಿದೆ ಎಂದರು.

ಡಿ. 25ರಂದು ಸಂಜೆ 6 ಗಂಟೆಗೆ ಮುಂಬೈನ ಪಂ. ಯೋಗೇಶ್ ಸಂಶಿ ಅವರಿಂದ ತಬಲಾ ವಾದನ, ಉಸ್ತಾದ್ ರಫೀಕ್‌ಖಾನ್ ಹಾಗೂ ಗುರುಪ್ರಸಾದ ಹೆಗಡೆ ಅವರಿಂದ ಸಿತಾರ್ ಸಂವಾದಿನಿ ಜುಗಲ್‌ಬಂದಿ ಜರುಗಲಿದೆ ಎಂದರು.

ಗುರುಪ್ರಸಾದ ಹೆಗಡೆ, ವಿಜೇತ ಹೆಗಡೆ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net