ರಾಜ್ಯೋತ್ಸವದ ನಾಡಹಬ್ಬ 10ರಂದು

IMG-20241105-WA0032.jpg
Published on

ಹುಬ್ಬಳ್ಳಿ: ಇಲ್ಲಿಯ ಪವರ್ ಆಫ್ ಯೂಥ್ಸ್ ಫೌಂಡೇಷನ್ ವತಿಯಿಂದ ಕನ್ನಡ ರಾಜ್ಯೋತ್ಸವದ ನಾಡಹಬ್ಬ ಅದ್ದೂರಿ ಸಾಂಸ್ಕೃತಿಕ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನವೆಂಬರ್ 10ರಂದು ಸಂಜೆ 4ಕ್ಕೆ ನಗರದ ಬೆಂಗೇರಿ ಸಂತೆ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ರವಿಚಂದ್ರ ದೊಡ್ಡಿಹಾಳ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪವರ್ ಆಫ್ ಯೂಥ್ಸ ಫೌಂಡೇಷನ್ ಸಮಾಜಮುಖಿ ಸೇವಾ ಕಾರ್ಯಗಳ ಕೈಪಿಡಿ ಬಿಡುಗಡೆ, ನಾ ಕಂಡಂತಹ ಶತಮಾನದ ಶರಣರು ಪುಸ್ತಕ ಹಾಗೂ ನಾ ಕಂಡ ಕನಸು ಶೈಕ್ಷಣಿಕ ಕಿರುಚಿತ್ರ ಬಿಡುಗಡೆಯೂ ನಡೆಯಲಿದೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮ ಮತ್ತು 11 ಜನ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಇತರ ಗಣ್ಯರು ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಎರಡು ವರ್ಷದಿಂದ ಫೌಂಡೇಷನ್ ಸಮಾಜದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಈ ವರೆಗೆ ಪರಿಸರ ಸಂರಕ್ಷಣೆ ಸೇರಿ 24 ಸಮಾಜಮುಖಿ ಚಟುವಟಿಕೆ ಮಾಡಲಾಗಿದೆ ಎಂದರು.

ಉಪಾಧ್ಯಕ್ಷ ಶ್ರೀನಿವಾಸ ವಾಲಿಕಾರ, ಫೌಂಡೇಷನ್ ಕಾರ್ಯದರ್ಶಿ ಪವನ ದಾಂಡೋಳಕರ, ವಿನಾಯಕ ಎಚ್. ರಾವೇಂದ್ರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net