

ಹುಬ್ಬಳ್ಳಿ : ನಗರದ ಹಿರಿಯ ವೖದ್ಯರಾದ ಡಾ. ವಿ.ಜಿ. ನಾಡಗೌಡ ಅವರಿಗೆ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ಸೌತ್ ವೇಲ್ಸ್ ವಿಶ್ವವಿದ್ಯಾಲಯವು ಮಧುಮೇಹ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪದವಿ ನೀಡಿದೆ.
ಕಳೆದ ಜ.26ರಂದು ಇಂಟರ್ನ್ಯಾಶನಲ್ ಕನ್ವೆನ್ಷನಲ್ ಸೆಂಟರ್ನಲ್ಲಿ ಈ ಪದವಿ ಪ್ರದಾನ ಸಮಾರಂಭ ನಡೆದಿದ್ದು, ಈ ಸಮಾರಂಭದಲ್ಲಿ ಪಾಲ್ಗೊಳ್ಳದ ಡಾ. ನಾಡಗೌಡರಿಗೆ ಫೆ. 12ರಂದು ಪ್ರಮಾಣಪತ್ರ ತಲುಪಿದೆ.
ಖ್ಯಾತ ವೈದ್ಯರಾದ ಡಾ.ನಾಡಗೌಡ ಅವರಿಗೆ ಕಳೆದ 2018ರಲ್ಲಿ ಕರ್ನಾಟಕ ರಾಜೊ್ಯೕತ್ಸವ ಪ್ರಶಸ್ತಿ ಸಹಿತ ನೂರಾರು ಪುರಸ್ಕಾರಗಳು ಅರಸಿ ಬಂದಿವೆ.