

ಕೊಪ್ಪಳ: ಪಿಂಜಾರ ನಿಗಮ ಅನುಷ್ಠಾನ ಮಾಡಿ ಅನುದಾನ ಒದಗಿಸಿ ಯೋಜನೆ ರೂಪಿಸಲು ಆಗ್ರಹಿಸಿ ರಾಜ್ಯ ರಾಜ್ಯ ನದಾಫ್/ ಪಿಂಜಾರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ನಾವು 25 ಲಕ್ಷ ಜನರಿದ್ದೇವೆ. ಸಾಮಾಜಿಕ, ಶೈಕ್ಷಣಿಕ, ಸಾಂಸತಿಕ, ಔದ್ಯೋಗಿಕ, ರಾಜಕೀಯವಾಗಿ ಹಿಂದುಳಿದಿದ್ದೇವೆ. ಮುಸ್ಲಿಮ್ ಧರ್ಮದವರಾದರೂ ಹಿಂದುಳಿದ ವರ್ಗಗಳ ಪ್ರವರ್ಗ 1ರಡಿ ಬರುತ್ತೇವೆ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸೌಲಭ್ಯಗಳು ದೊರೆಯುತ್ತಿಲ್ಲ. ಸರ್ಕಾರ ಸೂಚಿಸಿದರೂ ತಾಂತ್ರಿಕ ತೊಂದರೆಗಳಿಂದ ಸಾಧ್ಯವಾಗಿಲ್ಲ. ಅಧಿಕಾರಿಗಳ ರ್ನಿಲಕ್ಷ$್ಯತನದಿಂದ ಯಾವೊಂದು ಯೋಜನೆ ನಮಗೆ ತಲುಪುತ್ತಿಲ್ಲವೆಂದು ದೂರಿದರು.
ಸರ್ಕಾರ ನದಾಫ್/ಪಿಂಜಾರ ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಘೋಷಿಸಿದೆ. ಅದನ್ನು ಅನುಷ್ಠಾನ ಮಾಡಿ. ಅನುದಾನ ನೀಡಿ. ಹುದ್ದೆ ಸೃಜಿಸಿ ಅಧಿಕಾರಿಗಳನ್ನು ನೇಮಿಸಿ. ಆದರೆ, ಈ ಕೆಲಸವಾಗುತ್ತಿಲ್ಲ. ತಕ್ಷಣ ನಮ್ಮ ಬೇಡಿಕೆ ಈಡೇರಿಸಬೇಕು. ಸಚವಿ ತಂಗಡಗಿ ಹೇಳಿದಂತೆ ನಿಗಮಕ್ಕೆ 10 ಕೋಟಿ ಅನುದಾನ ಒದಗಿಸಿ. ಯೋಜನೆ ಜಾರಿ ಮಾಡಿ ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಹೋರಾಟಕ್ಕೆ ಇಳಿಯತ್ತೇವೆಂದು ಎಚ್ಚರಿಸಿದರು.
ರಾಜ್ಯ ನದಾಫ್/ಪಿಂಜಾರ ಸಂಘದ ಕೋಶಾಧ್ಯಕ್ಷ ಶಂಶುದ್ದೀನ್ ಸಾಬ್ ನೂರಬಾಷಾ, ಜಿಲ್ಲಾಧ್ಯಕ್ಷ ಖಾಸಿಂ ಅಲಿ ಮುದ್ದಾಬಳ್ಳಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸಲ್ಮಾ ಜಾನ್, ಜಿಲ್ಲಾ ಕಾರ್ಯದರ್ಶಿ ಯಾಸೀನಸಾಬ್, ತಾಲೂಕು ಅಧ್ಯಕ್ಷ ಅಸ್ಮಾನ್ ಸಾಬ್ ನದಾಫ್, ಜಿಲ್ಲಾ ಉಪಾಧ್ಯಕ್ಷ ಜಾಕೀರ್ ತಳಕಲ್, ಪ್ರಮುಖರಾದ ಮೀರಸಾಬ್ ಬನ್ನಿಗೋಳ, ಮುರ್ತುಜಸಾಬ್ ಚುಟ್ಟದ, ಮುಸ್ತಫಾ ಕುದುರಿಮೋತಿ, ರಿಯಾಜ್ ಕುದರಿಮೋತಿ, ಫಕ್ರುದ್ದೀನ್ ಟಣಕನಕಲ್, ಮರ್ದಾನ್ ಸಾಬ್ ಲುಂಗಿ, ನೂರಜಾ ಬೇಗಂ, ಮಾನ್ವಿ ಪಾಷಾ ಇತರರಿದ್ದರು.