

ತಾಳಿಕೋಟೆ: ಪಟ್ಟಣದಲ್ಲಿ ನವರಾತ್ರೋತ್ಸವ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ನಾಡದೇವಿ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಸುವ ಮೂಲಕ ದಸರಾ ಉತ್ಸವಕ್ಕೆ ಭಾನುವಾರ ತೆರೆ ಎಳೆಯಲಾಯಿತು.
ಪಟ್ಟಣದ ರಜಪೂತ ಬಡಾವಣೆ, ಕಾಮನಕಟ್ಟಿ ಬಡಾವಣೆ, ವಿಠ್ಠಲ ಮಂದಿರ ಹಾಗು ತಿಲಕ ರಸ್ತೆ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ದೇವಿಯರಿಗೆ 9 ದಿನ ವಿಶೇಷವಾಗಿ ಪೂಜೆ ಸಲ್ಲಿಸಲಾಯಿತು. ಭಾನುವಾರ ಸಂಜೆ ರಜಪೂತ ಸಮಾಜ ಬಾಂಧವರು ಶ್ರೀದೇವಿಯನ್ನು ಭವ್ಯ ರಥದಲ್ಲಿ ಮೆರವಣಿಗೆ
ಡೆಸಿದರು. ಮೆರವಣಿಗೆ ಖಾಸ್ಗತೇಶ್ವರ ಮಠ, ಕತ್ರಿ ಬಜಾರ್, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜ ವೃತ್ತದ ಮೂಲಕ ಮಹಾರಾಣಾಪ್ರತಾಪ ವೃತ್ತದವರೆಗೆ ಮೆರವಣಿಗೆ ಜರುಗಿ ಮುಕ್ತಾಯಗೊಂಡಿತು.
ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್ಐ ರಾಮನಗೌಡ ಸಂಕನಾಳ, ಆರ್.ಎಸ್.ಭಂಗಿ ಪೊಲೀಸ್ ಸಿಬ್ಬಂದಿಯೊಂದಿಗೆ ಭದ್ರತೆ ಒದಗಿಸಿದ್ದರು.