

ಮೂಲ್ಕಿ: ಇಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಏಕಾಹ ಭಜನೆ ಸಂದರ್ಭ ಭಜನಾ ಆಸಕ್ತರಿಗೆ ಆಂಡ್ರಾಯ್ಡಾ ಮೊಬೈಲ್ ಆ್ಯಪ್ ಅನ್ನು ಕ್ಷೇತ್ರದ ದೇವದರ್ಶನ ಪಾತ್ರಿ ಶ್ರೀ ಪಿ.ಸತ್ಯನಾರಾಯಣ ನಾಯಕ್ ಲೋಕಾರ್ಪಣೆಗೊಳಿಸಿದರು.
ನಾದಬ್ರಹ್ಮ ಭಜನಾ ಆ್ಯಪ್ ಸಂಪೂರ್ಣ ಉಚಿತವಾಗಿದ್ದು, ಭಜನಾ ಪುಸ್ತಕದ ಬದಲಿಯಾಗಿ ಆಂಡ್ರಾಯ್ಡಾ ಮೊಬೈಲ್ ಉಳ್ಳವರು ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿ ಉಪಯೋಗಿಸಬಹುದಾಗಿದೆ. ಇದರಲ್ಲಿ ಕನ್ನಡ, ತುಳು, ಮರಾಠಿ, ಹಿಂದಿ ಸಹಿತ ವಿವಿಧ ಭಾಷೆಗಳ ಭಜನಾ ಪದ್ಯ ಸಂಗ್ರಹ ಲಭ್ಯವಿದೆ. ನಮ್ಮ ಇಷ್ಟದ ಭಜನೆ ಕೇಳಲು ಸರ್ಚ್ ಇಂಜಿನ್ ಲಭ್ಯವಿದೆ. ಭಜನಾ ಪಠ್ಯ ಬೇಕಿದ್ದವರಿಗೆ ಪಠ್ಯವೂ ಲಭ್ಯ ಹಾಗೂ ವೃದ್ಧರಿಗೆ ಅಕ್ಷರಗಳನ್ನು ದೊಡ್ಡದುಮಾಡಿ ನೋಡುವ ಅವಕಾಶವಿದೆ. ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿವಿಧ ಹಬ್ಬ ಹಾಗೂ ರಥೋತ್ಸವದ ಸಂದರ್ಭ ಹಾಡುವ ವಿಶೇಷ ಭಜನಾ ಪದ್ಯಗಳ ಸಂಗ್ರಹ ಮತ್ತು ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮಗಳ ಯುಟ್ಯೂಬ್ ಲಿಂಕ್ ಕೂಡ ಆ್ಯಪ್‌ನಲ್ಲಿ ಸಭ್ಯ ಎಂದು ಆ್ಯಪ್ ಅಭಿವೃದ್ಧಿಪಡಿಸಿರುವ ದೇವಸ್ಥಾನದ ಭಜಕರಾದ ಪಂಡರಿನಾಥ ಶೆಣೈ ತಿಳಿಸಿದರು. ಶ್ರೀ ಕ್ಷೇತ್ರದ ಅರ್ಚಕವರ್ಗ, ಆಡಳಿತ ಮಂಡಳಿ ಮತ್ತು ಭಕ್ತವೃಂದ ಹಾಜರಿದ್ದರು.