ನಾಡ ಕಚೇರಿ ಪ್ರಾರಂಭಕ್ಕೆ ಪ್ರಯತ್ನ

6MDLG1
ಕುಲಗೋಡ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಗ್ರಾಮಸ್ಥರು ಸತ್ಕರಿಸಿದರು. ಅಶೋಕ ನಾಯಿಕ, ತಮ್ಮಣ್ಣ ದೇವರ, ಬಸನಗೌಡ ಪಾಟೀಲ, ಗೋವಿಂದ ಕೊಪ್ಪದ ಇತರರಿದ್ದರು.
Published on

ಮೂಡಲಗಿ: ಪ್ರಮುಖ ಬೇಡಿಕೆಯಾಗಿರುವ ನಾಡಕಚೇರಿಯನ್ನು ಕುಲಗೋಡದಲ್ಲಿ ಆರಂಭಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ ನೀಡಿದರು.

ಸಮೀಪದ ಕುಲಗೋಡ ಗ್ರಾಮದ ಬಲಭೀಮ ದೇವಸ್ಥಾನದಲ್ಲಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಸತ್ಕಾರ ಸ್ವೀಕರಿಸಿ ಮಾತನಾಡಿ, ಅರಬಾವಿ ನಾಡಕಚೇರಿ ದೂರವಾಗುತ್ತಿರುವುದರಿಂದ ಕುಲಗೋಡದಲ್ಲಿಯೇ ಆರಂಭಿಸಲು ಕಂದಾಯ ಇಲಾಖಾ ಅಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಉಂಟಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿತ್ತು. ಕ್ಷೇತ್ರದ ಸಾರ್ವಜನಿಕರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು. ಕುಲಗೋಡ ಗ್ರಾಮಸ್ಥರ ಎಲ್ಲ ಬೇಡಿಕೆಗಳಿಗೆ ಸ್ಪಂದಿತ್ತೇನೆ ಎಂದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕುಲಗೋಡ ಗ್ರಾಮಸ್ಥರು ಸತ್ಕರಿಸಿದರು. ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಗ್ರಾಪಂ ಅಧ್ಯಕ್ಷ ತಮ್ಮಣ್ಣ ದೇವರ, ಮುಖಂಡರಾದ ಬಸನಗೌಡ ಪಾಟೀಲ, ಗೋವಿಂದ ಕೊಪ್ಪದ, ಸುಭಾಷ ವಂಟಗೋಡಿ, ಪುಟ್ಟಣ್ಣ ಪೂಜೇರಿ, ಸುನೀಲ ವಂಟಗೋಡಿ, ಸತೀಶ ವಂಟಗೋಡಿ, ಶ್ರೀಪತಿ ಗಣಿ, ರಾಮಣ್ಣ ಭೈರನಟ್ಟಿ, ದತ್ತು ಕುಲಕರ್ಣಿ, ಅಶೋಕ ಚನ್ನಾಳ, ವೆಂಕಣ್ಣ ಚನ್ನಾಳ, ಬಸವಣ್ಣಿ ತಿಪ್ಪಿಮನಿ, ಹನಮಂತ ಚನ್ನಾಳ, ಪಾಪು ನಾಯಿಕ, ಚನ್ನಪ್ಪ ತಿಪ್ಪಿಮನಿ, ಅಲ್ಲಪ್ಪ ಪರುಶೆಟ್ಟಿ, ಸುಶೀಲಾ ಮಳಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net