ಶಿರಸಿಯಲ್ಲಿ ನಾದ - ನೃತ್ಯೋಪಾಸನಂ ಅ. 19ರಂದು

nrutya
Published on

ಶಿರಸಿ: ಸಿದ್ದಾಪುರದ ನಾದಾನುಸಂಧಾನಂ ಟ್ರಸ್ಟ್ ವತಿಯಿಂದ ಅ. 19ರಂದು ನಾದ - ನೃತ್ಯೋಪಾಸನಂ ಹಾಗೂ ಅ. 20ರಂದು ನಾದೋಪಾಸನಂ ಸಂಗೀತ, ನಾಟ್ಯ ಕಾರ್ಯಕ್ರಮವನ್ನು ನಗರದ ನೆಮ್ಮದಿ ಕುಟೀರದಲ್ಲಿ ಹಮ್ಮಿಕೊಳ್ಳಲಾಗಿದೆ.

ಟ್ರಸ್ಟ್ ಅಧ್ಯಕ್ಷ ಪ್ರವೀಣ ಭಟ್ ಹಾಗೂ ಕಾರ್ಯದರ್ಶಿ ಮೇಧಾ ಭಟ್ ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರ ಸಮ್ಮಿಲನದೊಂದಿಗೆ ಎರಡು ದಿನಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಅ. 19ರಂದು ಸಂಜೆ 4.30 ಕ್ಕೆ ನಾದ - ನೃತ್ಯೋಪಾಸನಂ ಕಾರ್ಯಕ್ರಮ ಆರಂಭವಾಗಲಿದ್ದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ, ಅಕಾಡೆಮಿ ರಿಜಿಸ್ಟ್ರಾರ್ ನರೇಂದ್ರ ಬಾಬು ಎನ್., ಕಲಾವಿದ ವಿ.ಆನೂರು ಅನಂತಕೃಷ್ಣ ಶರ್ಮ, ತ್ರಯಿ ಕಲಾ ಸಂಸ್ಥೆ ನಿರ್ದೇಶಕಿ ಅಕ್ಷತಾ ಜೋಶಿ, ಕಲಾವಿದೆ ಸೀಮಾ ಭಾಗ್ವತ್ ಉದ್ಘಾಟಿಸುವರು. ಬಳಿಕ 5 ಗಂಟೆಯಿಂದ ನಾಟ್ಯದೀಪ ಕಲ್ಚರಲ್ ಟೀಮ್ ಶಿರಸಿ ವತಿಯಿಂದ ಪಾವನಪಾದ ಎನ್ನುವ ಭರತನಾಟ್ಯ ನೃತ್ಯರೂಪಕ ನಡೆಯಲಿದೆ. ಸಂಜೆ 6 ಗಂಟೆಯಿಂದ ವಿ.ಆನೂರು ಅನಂತಕೃಷ್ಣ ಶರ್ಮ ನಿರ್ದೇಶನದಲ್ಲಿ ಲಯ - ಲಾವಣ್ಯ ಕಾರ್ಯಕ್ರಮ ನಡೆಯಲಿದೆ ಎಂದರು.

ನಾದಾನುಸಂಧಾನಂ ಟ್ರಸ್ಟ್ ಮತ್ತು ತ್ರಯಿ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ಅ. 20ರಂದು ಸಂಜೆ 4.45ಕ್ಕೆ ಬಾನ್ಸುರಿ ವಾದನ ನಡೆಯಲಿದ್ದು, ಪ್ರಥ್ವಿರಾಜ ನಾರಾಯಣ ಕುಲಕರ್ಣಿ ಹಾಗೂ ತಬಲಾದಲ್ಲಿ ನಾಗರಾಜ ಹೆಗಡೆ ಭಾಗವಹಿಸಲಿದ್ದಾರೆ. ಬಳಿಕ ಸಂಜೆ 5.30 ರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕಲಾವಿದ ಪಂ. ಶೌನಕ್ ಅಭಿಷೇಕೀ ಮುಂಬೈ, ಹಾಸಣಗಿ ಗಣಪತಿ ಭಟ್ ಅವರ ಶಿಷ್ಯೆ ಮೇಧಾ ಭಟ್ ಅಗ್ಗೇರೆ ಸಂಗೀತ ಪ್ರಸ್ತುತಪಡಿಸುವರು. ಸಂವಾದಿನಿ ಪಂ. ಸುಧಾಂಶು ಕುಲಕರ್ಣಿ, ತಬಲಾ ಪಂ. ಉದಯ ಕುಲಕರ್ಣಿ, ಮಂಜೀರಾ ಅನಂತಮೂರ್ತಿ ಮತ್ತಿಘಟ್ಟಾ ಭಾಗವಹಿಸುವರು ಎಂದು ತಿಳಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net