ಚನ್ನರಾಯಪಟ್ಟಣದಲ್ಲಿ ನಾದ, ಧ್ಯಾನ ಯಜ್ಞ ಇಂದು

12 CRP-4A
ಚನ್ನರಾಯಪಟ್ಟಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಡಿದರು. ಮಮತಾ, ಬೊಮ್ಮೇಗೌಡ, ಸಿ.ಎನ್.ಅಶೋಕ್ ಇದ್ದರು.
Published on

ಚನ್ನರಾಯಪಟ್ಟಣ: ತಾಲೂಕಿನ ಜನತೆಗೆ ಉತ್ತಮ ಆರೋಗ್ಯ ಹೊಂದಬೇಕೆಂಬ ದೃಷ್ಟಿಯಿಂದ ಜು.13ರಂದು ಎಚ್‌ಎನ್‌ಆರ್ ಕಲ್ಯಾಣ ಮಂಟಪದಲ್ಲಿ ನಾದ, ಧ್ಯಾನ ಯಜ್ಞ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮನಸ್ಸನ್ನು ಸುಸ್ಥಿತಿಯಲ್ಲಿಡಲು ಯೋಗ ಮತ್ತು ಧ್ಯಾನ ಅನಿವಾರ್ಯ. ಒತ್ತಡದಿಂದ ವಿಮುಖರಾಗಲು ಇವೆರಡೂ ಪ್ರಮುಖ ಅಸ್ತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಾಯಿಲೆಗಳು ನಾನಾ ರೂಪಗಳಿಂದ ಬರುತ್ತಿದ್ದು, ಕೇವಲ ಹಣದಿಂದ ಶಾಂತಿ, ನೆಮ್ಮದಿ ಪಡೆದುಕೊಳ್ಳಲು ಸಾಧ್ಯವಿಲ್ಲವೆಂಬ ಸತ್ಯವನ್ನು ಎಲ್ಲರೂ ಅರಿಯಬೇಕು ಎಂದರು.

ನಾನಾ ದೇಶಗಳಲ್ಲಿ ಹೆಚ್ಚು ಹಣ ಖರ್ಚು ಮಾಡಿ ಇಂತಹ ಶಿಬಿರಗಳಿಗೆ ಹೋಗಿ ಕಲಿಯಲಾಗುತ್ತಿದೆ. ಆದರೆ ಇಲ್ಲಿ ನಮ್ಮ ಮನೆ ಬಾಗಿಲಲ್ಲೇ ಲಭ್ಯವಿರುವ ಈ ಅವಕಾಶವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ಅಂತಾರಾಷ್ಟ್ರೀಯ ತರಬೇತುದಾರ ಡಾ.ಅಯ್ಯಪ್ಪಪಿಂಡಿ ಮಾತನಾಡಿ, ಪ್ರತಿಯೊಬ್ಬರಿಗೂ ಯೋಗ ಮತ್ತು ಧ್ಯಾನ ಅವಶ್ಯಕ. ಇದೊಂದು ವಿಶೇಷ ಮಾದರಿಯ ಧ್ಯಾನ ಶಿಬಿರವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯಬೇಕು. ಬೆಳಗಿನ ಉಪಾಹಾರದೊಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯೂ ಇರಲಿದೆ. ಶಿಬಿರದ ಸಂಪೂರ್ಣ ಸಮಯವನ್ನು ಇದಕ್ಕಾಗಿ ವಿನಿಯೋಗ ಮಾಡಬೇಕು ಎಂದರು.

ಸಂಚಾಲಕಿ ಮಮತಾ, ಬೊಮ್ಮೇಗೌಡ, ಸಿ.ಎನ್.ಅಶೋಕ್ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net