ನ್ಯಾಕ್ ತಜ್ಞರ ಸಮಿತಿ ಭೇಟಿ

1
ನಿಡಸೋಸಿ ಹಿರಾಶುಗರ ತಾಂತ್ರಿಕ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದ ನ್ಯಾಕ್ ಸಮಿತಿ ತಂಡ ಪ್ರಾಂಶುಪಾಲ ಡಾ. ಎಸ್.ಸಿ.ಕಮತೆ ಅವರಿಗೆ ವಿಶ್ಲೇಷನಾ ವರದಿ ವಿತರಿಸಿದರು. ಡಾ.ಸಂದೀಪ ಸಂಚೇಟಿ, ಡಾ.ದಿವಾಕರ ರೆಡ್ಡಿ ವಿ., ಡಾ. ಸತ್ಯೇಂದ್ರ ಮಿಶ್ರಾ ಇದ್ದರು.
Published on

ಸಂಕೇಶ್ವರ: ಸಮೀಪದ ನಿಡಸೋಸಿ ಹಿರಾಶುಗರ ತಾಂತ್ರಿಕ ಮಹಾವಿದ್ಯಾಲಯಕ್ಕೆ ನ್ಯಾಕ್ ತಜ್ಞರ ತಂಡದ ಚೇರ್ಮನ್ ಡಾ. ಸಂದೀಪ ಸಂಚೇಟಿ ಹಾಗೂ ಸಮಿತಿಯ ಡಾ.ದಿವಾಕರ ರೆಡ್ಡಿ ವಿ., ಡಾ. ಸತ್ಯೇಂದ್ರ ಮಿಶ್ರಾ ಸೇರಿ ಮೂರು ಜನ ತಜ್ಞರೊಳಗೊಂಡ ಸಮಿತಿಯು ನ್ಯಾಶನಲ್ ಅಸೆಸ್ಸಮೆಂಟ್ ಹಾಗೂ ಅಕ್ರಿಡೇಶನ್ ಕೌನ್ಸಿಲನ ಪರವಾಗಿ ಬುಧವಾರ ಭೇಟಿ ನೀಡಿದರು.

ಕಾಲೇಜಿನ ಎಲ್ಲ ವ್ಯವಸ್ಥೆಗಳನ್ನು ಕೂಲಂಕುಶವಾಗಿ ಪರಿವೀಕ್ಷಿಸಿ ನ್ಯಾಕ್‌ಗೆ ಮುಂದಿನ ಐದು ವರ್ಷಗಳ ಕಾಲಕ್ಕೆ ಯೋಗ್ಯ ಗ್ರೇಡ್‌ನೊಂದಿಗೆ ಮಾನ್ಯತೆ ನೀಡಲು ಶಿಫಾರಸು ಮಾಡಿ ತಮ್ಮ ವರದಿಯನ್ನು ಮುಚ್ಚಿದ ಲಕೋಟಿಯಲ್ಲಿ ಪ್ರಾಂಶುಪಾಲ ಡಾ. ಎಸ್.ಸಿ.ಕಮತೆ ಅವರಿಗೆ ಸಲ್ಲಿಸಿದರು. ಸಂಸ್ಥೆಯ ಅಧ್ಯಕ್ಷ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಎಲ್ಲರನ್ನೂ ಆಶೀರ್ವದಿಸಿ ಶುಭ ಹಾರೈಸಿದರು. ನಿಜಲಿಂಗೇಶ್ವರ ಸ್ವಾಮೀಜಿ, ಡಾ.ಎನ್.ಎನ್.ಟೋಪನ್ನವರ ಹಾಗೂ ಆಡಳಿತ ಮಂಡಳಿಯ ಸದ್ಯಸರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net