

ಬೆಂಗಳೂರು: ದೇಶದ ಪ್ರತಿಷ್ಠಿತ ಆಸ್ಪತ್ರೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನ್ಯಾಷನಲ್ ಅಕ್ರಿಡೇಷನ್ ಬೋರ್ಡ್ ಫಾರ್ ಹಾಸ್ಪೆಟಲ್ (ಎನ್‌ಎಬಿಎಚ್) ಮಾನ್ಯತೆ ಪಡೆದ ಮೊದಲ ಐಎನ್‌ಐ (ರಾಷ್ಟ್ರೀಯ ಪ್ರಾಮುಖ್ಯತಾ ಸಂಸ್ಥೆ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟ ಮತ್ತು ರೋಗಿಗಳ ಸುರಕ್ಷತೆಯಲ್ಲಿ ಸಂಸ್ಥೆ ಕಾಯ್ದುಕೊಂಡಿರುವ ನಿರಂತರ ಸುಧಾರಣೆ ಹಾಗೂ ಅತ್ಯುನ್ನತ ಗುಣಮಟ್ಟದ (ಗೋಲ್ಡನ್ ಸ್ಟಾೃಂಡರ್ಡ್ಸ್) ಮಾನದಂಡಗಳನ್ನು ಹಾಗೂ ಸೇವೆಯಲ್ಲಿನ ಸಮರ್ಪಣಾ ಭಾವನೆಯನ್ನು ಪರಿಗಣಿಸಿ ಈ ಮಾನ್ಯತೆ ನೀಡಲಾಗಿದೆ. ಇದು ಸಂಸ್ಥೆಯಲ್ಲಿ ಲಭ್ಯವಿರುವ ಉನ್ನತ ದರ್ಜೆಯ ಆರೋಗ್ಯ ಸೇವೆಗಳನ್ನು ಹಾಗೂ ಅದನ್ನು ಜನ ಸಾಮಾನ್ಯರಿಗೆ ತಲುಪಿಸುತ್ತಿರುವ ದೃಢವಾದ ಬದ್ಧತೆಯನ್ನು ಈ ಮಾನ್ಯತೆ ಸಾಕ್ಷೀಕರಿಸುತ್ತದೆ.
ಇದು ಎಲ್ಲಾ ಹಂತಗಳಲ್ಲಿ ರೋಗಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವುದರ ಜೊತೆಗೆ ಸಂಸ್ಥೆಯ ಮೂಲಸೌಕರ್ಯ ಮತ್ತು ಸೌಲಭ್ಯಗಳು, ಕ್ಲಿನಿಲಲ್ ಪ್ರೋಟೋಕಾಲ್‌ಗಳು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಳ ಆಳವಾದ ಮೌಲ್ಯಪಾನವನ್ನು ಒಳಗೊಂಡಿದೆ. ಎನ್‌ಎಬಿಎಚ್ ಮಾನ್ಯತೆ ದೊರೆಯಲು ಸಹಕರಿಸಿದ ಸಂಸ್ಥೆಯ ಎಲ್ಲ ವೈದ್ಯರು ಹಾಗೂ ಸಿಬ್ಬಂದಿಗೆ ಸಂಸ್ಥೆಯ ನಿದೇರ್ಶಕಿ ಡಾ. ಪ್ರತಿಮಾ ಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ.