

ಸಕಲೇಶಪುರ: ದಿನಪತ್ರಿಕೆಗಳ ಓದುವುದರಿಂದ ಜ್ಞಾನ ವೃದ್ದಿಯಾಗಲಿದೆ ಎಂದು ಶಾಸಕ ಸೀಮೆಂಟ್ ಮಂಜು ಹೇಳಿದರು.
ಶುಕ್ರವಾರ ಪಟ್ಟಣದ ಶಾಸಕರ ನಿವಾಸದಲ್ಲಿ ವಿಜಯವಾಣಿ ಪತ್ರಿಕೆಯ ನಾರಿ ನೀನಗೊಂದು ಸಾರಿ ಕಾರ್ಯಕ್ರಮದ ಅದೃಷ್ಟವಂತ ವಿಜೇತರ ಆಯ್ಕೆ ಮಾಡಿದ ನಂತರ ಮಾತನಾಡಿ, ಇಂದು ಸಾಮಾಜಿಕ ಜಾಲತಾಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಎಷ್ಟೇ ಪ್ರಬಾವಿಯಾಗಿ ಬೆಳೆದರು ಮುದ್ರಣ ಮಾಧ್ಯಮ ತನ್ನ ಓದುಗರನ್ನು ಹಿಡಿದಿಡಲು ಯಶಸ್ವಿಯಾಗಿದೆ. ನೋಡುವುದಕ್ಕಿಂತ ಓದುವುದರಿಂದ ಹೆಚ್ಚಿನ ನೆನಪು ಉಳಿಯಲಿದೆ. ಆದ್ದರಿಂದ, ದಿನಪತ್ರಿಕೆಗಳನ್ನು ಜನರು ಹೆಚ್ಚು ಓದುವಂತಾಗ ಬೇಕು ಎಂದರು.
ಸಾರಿವಿಜೇತ ಓದುಗ ಅದೃಷ್ಟವಂತರು. 1) ಕೆ.ಜಿ ಗೀತಾ ಲೋಕಪಯೋಗಿ ಇಲಾಖೆ ಹಿಂಭಾಗ.2)ರೇಷ್ಮಾ ಪ್ರೀತಮ್.ಎಸ್.ಎಂ ರಸ್ತೆ.3)ರಾಜೇಶ್‌ಗೌಡ.ಸಕಲೇಶಪುರ.4) ಜ್ಯೋತಿ ಪೋಲಿಸ್ ಕ್ವಾರ್ಟಸ್ ಸಕಲೇಶಪುರ. 5)ವಿದ್ಯಾ.ಚಂಪಕನಗರ.
ಈ ವೇಳೆ ಶಾಸಕರ ಪತ್ನಿ ಪ್ರತಿಭಾ ಮಂಜು,ಮುಖಂಡರಾದ ಮದನ್, ಉಮೇಶ್,ದೇವರಾಜ್ ಮುಂತಾದವರಿದ್ದರು.
27 ಎಸ್‌ಕೆಪಿಪಿ 2 ನಾರಿ ನೀನಗೊಂದು ಸಾರಿ ಕಾರ್ಯಕ್ರಮದ ಅದೃಷ್ಟವಂತರನ್ನು ಲಾಟರಿ ಮೂಲಕ ಆಯ್ಕೆಮಾಡಿದ ಶಾಸಕ ಸೀಮೆಂಟ್ ಮಂಜು ದಂಪತಿಗಳು.