

ಹುಬ್ಬಳ್ಳಿ: ಕನ್ನಡದ ನಂಬರ್ ಒನ್ ಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾರಿಯರಿಗೆ ಸೀರೆ ವಿತರಣೆ ಕಾರ್ಯಕ್ರಮ ಮಂಗಳವಾರ ಏರ್ಪಡಿಸಲಾಗಿತ್ತು.
ಇಲ್ಲಿಯ ತೋಳನಕೆರೆ ಬಳಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಐವರು ಮಹಿಳೆಯರಿಗೆ ಸೀರೆ ವಿತರಣೆ ಮಾಡಲಾಯಿತು. ಲಕ್ಷ್ಮೀ ಹಬೀಬ, ರೂಪಾ ಕುಂದರಗಿ, ಸ್ಮೀತಾ ರಾಯಲ್ಕೇರಿ, ಗೀತಾ ಸಪ್ಪಡ್ಲ ಹಾಗೂ ಗೀತಾ ರಾಯ್ಕರ್ ಅವರು ಸೀರೆ ಪಡೆದುಕೊಂಡರು.
ವಸತಿ ನಿಲಯದ ನಿಲಯ ಪಾಲಕಿ ಶೋಭಾ ವಂದಾಲ ಅವರು ವಿಜೇತರಿಗೆ ಸೀರೆ ವಿತರಣೆ ಮಾಡಿ ಮಾತನಾಡಿ, ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ನಾರಿ ನಿನಗೊಂದು ಸ್ಯಾರಿ ಅಭಿಯಾನಕ್ಕೆ ಮಹಿಳೆಯರು ಉತ್ತಮ ಸ್ಪಂದನೆ ನೀಡಿದ್ದಾರೆ. ಸಮಾಜದ ಎಲ್ಲ ವರ್ಗದ ಜನರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಿರುವ ವಿಜಯವಾಣಿ ಕಾರ್ಯ ಶ್ಲಾಘನೀಯ ಎಂದರು.
ತಾಲೂಕು ಹಾಸ್ಟೆಲ್ ನಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. ಹಾಸ್ಟೆಲ್ ಗೆ ನಿತ್ಯ ಬರುವ ವಿಜಯವಾಣಿ ಪತ್ರಿಕೆಯಿಂದ ವಿದ್ಯಾರ್ಥಿಗಳು ಅನೇಕ ವಿಷಯಗಳನ್ನು ಸಂಗ್ರಹ ಮಾಡುತ್ತಾರೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳಷ್ಟು ಅನುಕೂಲವಾಗಿದೆ. ಜ್ಞಾನ ಹೆಚ್ಚಿಸಿಕೊಂಡ ಅನೇಕ ವಿದ್ಯಾರ್ಥಿಗಳು ಪಾಲಕರ ಹೆಮ್ಮೆಯ ಮಕ್ಕಳಾಗಿ ಬೆಳೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂತಹ ಸಂಭ್ರಮದ ಕಾರ್ಯಕ್ರಮಕ್ಕೆ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ. ನಮ್ಮ ವಿದ್ಯಾರ್ಥಿಗಳಿಗೂ ಇದರಿಂದ ಹುಮ್ಮಸ್ಸು ಬರುತ್ತದೆ ಎಂದು ಹೇಳಿದರು.
ಲಕ್ಕಿ ಡೀಪ್ ನಲ್ಲಿ ತಮ್ಮ ಹೆಸರು ಬಂದಿರುವುದಕ್ಕೆ ಖುಷಿ ಹಂಚಿಕೊಂಡ ವಿಜೇತ ಮಹಿಳೆಯರು ಬಹುಮಾನ ಸ್ವೀಕರಿಸಿದರು. ಅನೇಕರು ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಆಗಮಿಸಿ ಮೆರಗು ತಂದರು. ಕಿರಿಯ ವಾರ್ಡನ್ ಆಯಿಷಾ ಬೆಟ್ಟೂರ್, ವಿದ್ಯಾರ್ಥಿನಿಯರು ಇದ್ದರು.