ಕಸಾಪದಲ್ಲಿ ‘ನಾದ ಸೌರಭ - 2024’

Kasapa
Published on

ಬೆಂಗಳೂರು: ಸರಸ್ವತೀ ಸಂಗೀತ ವಿದ್ಯಾಲಯವು ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶನಿವಾರ (ಜೂ. 8) ಸಂಜೆ 5.30ಕ್ಕೆ ‘ನಾದ ಸೌರಭ- 2024’ ಕಾರ್ಯಕ್ರಮ ಹಮ್ಮಿಕೊಂಡಿದೆ.

ನಾಟಕಕಾರ ಬಿ.ಆರ್. ಶಿವರಾಮಯ್ಯಗೆ ‘ಗೋವಿಂದ ಲಕ್ಷ್ಮೀ ಪುರಸ್ಕಾರ’ ಹಾಗೂ ಹಾರ್ಮೋನಿಯಂ ವಿದ್ವಾಂಸ ಪಂಡಿತ್ ಸುಧಾಂಶು ಕುಲಕರ್ಣಿಗೆ ‘ಶ್ಯಾಮಲಾ ಸ್ಮತಿ ಸಮ್ಮಾನ್ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಕರ್ಣಾಟಕ ಬ್ಯಾಂಕ್‌ನ ನಿವೃತ್ತ ಶಾಖಾ ಪ್ರಬಂಧಕ ರಾಘವೇಂದ್ರ ಹೆಬ್ಬಾರ್ ಐರೋಡಿ ಇತರರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಪಂಡಿತ್ ಗೋವಿಂದ್ ವಿಠಲ್ ಭಾವೆ ಮತ್ತು ಲಕ್ಷ್ಮೀ ಜಿ. ಭಾವೆ ಹಾಗೂ ಶ್ಯಾಮಲಾ ಜಿ. ಭಾವೆ ಗುರು ಪರಂಪರೆಯ ಸ್ಮರಣೆಯಲ್ಲಿ ‘ನಾದಾಂಜಲಿ’ ಸಂಗೀತ ಕಾರ್ಯಕ್ರಮ ಜರುಗಲಿದೆ. ಗಾಯಕ ಪಂಡಿತ್ ವಾಗೀಶ್ ಭಟ್, ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ, ಹಾರ್ಮೋನಿಯಂ ವಾದಕ ಪಂಡಿತ್ ಶಿವಕುಮಾರ್ ಮಹಾಂತ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸ್ಮತಿ ಎಸ್. ಭಟ್ ಅವರಿಂದ ಭಕ್ತಿ ಸಂಗೀತಕ್ಕೆ ಪ್ರಣವ್ ಪೈ ತಬಲ ಸಾಥ್ ನೀಡಲಿದ್ದಾರೆ. ಪಂಡಿತ್ ಸುಧಾಂಶು ಕುಲಕರ್ಣಿ ಹಾಗೂ ಸಾರಂಗ್ ಕುಲಕರ್ಣಿ ಅವರಿಂದ ಹಿಂದೂಸ್ತಾನಿ ಹಾರ್ಮೋನಿಯಂ ದ್ವಂದ್ವ ವಾದನ ನಡೆಯಲಿದ್ದು, ಪಂಡಿತ್ ರಾಜೇಂದ್ರ ನಾಕೊಡ್ ತಬಾಲ ಸಾಥ್ ನೀಡಲಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net