ಅರಣ್ಯ ದೇಶದ ಸಂಪತ್ತು

11HSN6
Published on

ಜಿಲ್ಲಾಧಿಕಾರಿ ಆರ್.ಗಿರೀಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪಿ.ಶಂಕರ್, ಉಪ ಅರಣ್ಯಾಧಿಕಾರಿ ಎಂ. ಶಿವರಾಂಬಾಬು ಇತರರಿದ್ದರು.

ಹಲವೆಡೆ ಅರಣ್ಯಗಳು ಒತ್ತುವರಿಯಾಗುತ್ತಿದ್ದು, ಸರ್ಕಾರ ಆದಷ್ಟು ಕ್ರಮ ವಹಿಸುತ್ತಿದೆ. ಸಾರ್ವಜನಿಕರೂ ಇದರಲ್ಲಿ ಕೈಜೋಡಿಸುವ ಮೂಲಕ ಅರಣ್ಯ ಸಂರಕ್ಷಣೆ ಮಾಡಿದರೆ ನಮ್ಮ ದೇಶಕ್ಕೆ ಅರಣ್ಯ ಸಂಪತ್ತಿನ ಉಪಯೋಗ ಹೆಚ್ಚಾಗುತ್ತದೆ ಎಂದರು.

ಅರಣ್ಯ ಸಿಬ್ಬಂದಿ ಮರಗಳ ಕಳ್ಳ ಸಾಗಣೆ ಮಾಡುವವರ ವಿರುದ್ಧ, ವನ್ಯಜೀವಿ ಬೇಟೆ ಆಡುವವರ ವಿರುದ್ಧ ಪ್ರಾಣದ ಹಂಗು ತೊರೆದು ಹೋರಾಡುತ್ತಾರೆ. ಅಂತಹ ಸಂದರ್ಭದಲ್ಲಿ ಹುತಾತ್ಮರಾದ ಎಲ್ಲರ ಸಾಧನೆ ಚಿರಸ್ಮರಣೀಯ ಎಂದು ಶಿವಣ್ಣ ಹೇಳಿದರು.

ದೇಶದಲ್ಲಿ ಅರಣ್ಯ ಸಂಪತ್ತು ಇರುವುದರಿಂದ ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ಸುಖ ಸಮೃದ್ಧಿ ನೆಲೆಸಿದೆ. ಜೀವ ಸಂಕುಲದ ಉಳಿವಿಗೆ ಮಳೆ, ಗಾಳಿ ಹಾಗೂ ನೀರು ಅತ್ಯವಶ್ಯಕ. ಹಾಗಾಗಿ, ವನ ಸಂವರ್ಧನೆಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಅರಣ್ಯ ಇಲಾಖೆ ವತಿಯಿಂದ ನಗರದ ಅರಣ್ಯ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಅರಣ್ಯ ದೇಶದ ಸಂಪತ್ತು. ಅದರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಶಿವಣ್ಣ ತಿಳಿಸಿದರು.

ವಿಜಯವಾಣಿ ಸುದ್ದಿಜಾಲ ಹಾಸನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net