ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎನ್.ಎಸ್.ಹೆಗಡೆ ನೇಮಕ

N.S.Hegde
Published on

ಕಾರವಾರ: ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಎನ್. ಎಸ್.ಹೆಗಡೆ ನೇಮಕಗೊಂಡಿದ್ದಾರೆ.
ಹೊನ್ನಾವರ ಕರ್ಕಿ ಮೂಲದ ಅವರು, ನವರತ್ನಾ ಫುಡ್ ಪ್ರೊಡ್ಕಕ್ಟ್ ಎಂಬ ಉದ್ಯಮ ನಡೆಸುತ್ತಿದ್ದಾರೆ.
ಈ ಹಿಂದೆ ಅವರು ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ನಂತರ ವಿಭಾಗ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹಾಲಿ ಅಧ್ಯಕ್ಷ ವೆಂಕಟೇಶ ನಾಯಕ ಅವರ ಅಧಿಕಾರಾವಧಿ ಮುಗಿದಿದ್ದು, ಅವರೂ ಸೇರಿ ರಾಜ್ಯದ 39 ಜಿಲ್ಲೆಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ಜನವರಿ ಮದಲ ವಾರ ಶಿರಸಿಗೆ ಆಗಮಿಸಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಶಾಸಕ ಹರೀಶ ಪೂಂಕಾ ಆಕಾಂಕ್ಷಿಗಳ ಪಟ್ಟಿ ತಯಾರಿಸಿದ್ದರು. 11 ಜನ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದರು.
ಮುಖ್ಯವಾಗಿ ಹಳಿಯಾಳದ ಮಾಜಿ ಶಾಸಕ ಸುನೀಲ ಹೆಗಡೆ, ಪಶ್ಚಿಮ‌ ಘಟ್ಟ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಪಕ್ಷದ ಹಾಲಿ ಜಿಲ್ಲಾ ಕಾರ್ಯದರ್ಶಿ ಚಂದ್ರು ಎಸಳೆ, ಹೊನ್ನಾವರದ ಎನ್.ಎಸ್.ಹೆಗಡೆ, ವಿನೋದ ನಾಯ್ಕ ರಾಯಲ್ ಕೇರಿ, ಭಟ್ಕಳದ ಈಶ್ವರ ನಾಯ್ಕ, ರಾಜೇಶ ನಾಯ್ಕ, ಕುಮಟಾದ ಎಂ.ಜಿ.ಭಟ್, ಕುಮಾರ ಮಾರ್ಕಾಂಡೆ, ಹೇಮಂತ ಗಾಂವಕರ್,‌ ಅಂಕೋಲಾದ ಜಗದೀಶ ನಾಯಕ ಮೊಗಟಾ ಸ್ಪರ್ಧೆಯಲ್ಲಿದ್ದರು.
ಪಕ್ಷಕ್ಕೆ ನೀಡಿದ ಸೇವೆ, ಜಾತಿ, ಪ್ರದೇಶದ ಮಹತ್ವ ಆಧರಿಸಿ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕುಮಟಾದ ವಿನೋದ ಪ್ರಭು, ಕಾರವಾರದ
ಪ್ರಸಾದ ಕಾರವಾರಕರ್, ಹೊನ್ನಾವರದ ಎಂ.ಜಿ.ನಾಯ್ಕ, ಸಿದ್ದಾಪುರದ ಕೆ.ಜಿ.ನಾಯ್ಕ ಹಾಗೂ ಕುಮಟಾದ ವೆಂಕಟೇಶ ನಾಯಕ ಜಿಲ್ಲಾಧ್ಯಕ್ಷರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net