ಮೈಸೂರು: ವಿಜಯನಗರ ಎರಡನೇ ಹಂತದ ಟ್ರಿನಿಟಿ ಕಾಲೇಜಿನಲ್ಲಿ ಏ.19ರಂದು ತ್ರಿವಿಧ ರಾಜ್ಯಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲೆ ಶಮಾ ಮಿಲ್ಟನ್ ತಿಳಿಸಿದರು.
ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟಿಸಲಾಗುವುದು. ಭಾರತೀಯ ಅಂಧರ ಕ್ರಿಕೆಟ್ ಮಾಜಿ ನಾಯಕ ಶೇಖರ್ ನಾಯ್ಕ್, ಇನ್ಫೋಫಿನ್ ಮಂಡಳಿ ಅಧ್ಯಕ್ಷ ಅಚ್ಯುತ ಬಿ.ಕೃಷ್ಣಮೂರ್ತಿ ಇತರರು ಭಾಗವಹಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಫೆಸ್ಟ್‌ನಲ್ಲಿ ಉತ್ಕರ್ಷ್ (ವ್ಯಾಪಾರ), ನವ ಸೃಜನ್ (ತಾಂತ್ರಿಕ), ಪ್ರಾಹರತಿ (ಕ್ರೀಡೆ) ಮತ್ತು ಸಾಂಸ್ಕೃತಿಕ ಎಂಬ ಹೆಸರಿನ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5ಕ್ಕೆ ನಾರ್ಥ್ ಅವೆನ್ಯೂ ಹೋಟೆಲ್‌ನಲ್ಲಿ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಮೈಸೂರು ಎಕ್ಸ್‌ಪ್ರೆಸ್ ಬ್ಯಾಂಡ್‌ನಿಂದ ಸಂಗೀತ ಪ್ರದರ್ಶನ, ನಿಖಿಲ್ ಭಾರದ್ವಾಜ್ ಅವರಿಂದ ಡಿಜೆ ಕಾರ್ಯಕ್ರಮ ನಡೆಯಲಿದೆ. ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಇದ್ದು, ಕಡ್ಡಾಯವಾಗಿ ಗುರುತಿನ ಕಾರ್ಡ್ ತರಬೇಕು ಎಂದು ಮಾಹಿತಿ ನೀಡಿದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಮಂಜು, ವಿದ್ಯಾರ್ಥಿ ಪ್ರಮುಖರಾದ ಆನ್ಸಿಲಾ, ಪ್ರಶಾಂತ್ ಇದ್ದರು.