ವಿಜಯವಾಣಿ ಸುದ್ದಿಜಾಲ ಧಾರವಾಡ.ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ 2ನೇ ಅಪರ ಜಿಲ್ಲಾ ಸರ್ಕಾರಿ ವಕೀಲರಾಗಿ ಹಿರಿಯ ನ್ಯಾಯವಾದಿ ಎನ್.ಆರ್. ಮಟ್ಟಿ ನೇಮಕಗೊಂಡಿದ್ದಾರೆ. ರಾಜ್ಯಪಾಲರ ಆದೇಶದ ಅನುಸಾರ ಕಾನೂನು ಇಲಾಖೆಯಿಂದ ಅಧೀನ ಕಾರ್ಯದರ್ಶಿ ಆದಿ ನಾರಾಯಣ ಅವರು 3 ವರ್ಷಗಳ ಅವಧಿಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.