ಇ-ಖಾತೆ ಕುರಿತ ಎನ್.ಮಹೇಶ್ ಹೇಳಿಕೆ ಖಂಡನೀಯ

Gn nanjunadaswamy
ಶಾಸಕ ಜಿ.ಎನ್. ನಂಜುಂಡಸ್ವಾಮಿ.
Published on

ಕೊಳ್ಳೇಗಾಲ: ಇ-ಖಾತೆ ವಿತರಣೆ ವಿಚಾರವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಅವರ ಆಕ್ಷೇಪ ಖಂಡನೀಯ ಎಂದು ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇ-ಖಾತಾ ವಿಚಾರ ನಿನ್ನೆ ಮೊನ್ನೆದಲ್ಲ, ಎನ್.ಮಹೇಶ್ ಅವರು ಶಾಸಕರಾಗಿದ್ದ ವೇಳೆ ಅಂದಿನ ಬಿಜೆಪಿ ಖಾತೆ ನೀಡಲು ಗೆಜೆಟ್ ನೋಟಿಫಿಕೇಶನ್ ಹೊರಡಿಸಿತ್ತು. ಆದರೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಯಿತು. ಇದರಿಂದ ಸಾರ್ವಜನಿಕರಿಗೆ ಅನ್ಯಾಯವಾಯಿತು. ಆದರೀಗ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಇ-ಖಾತೆ ಅಭಿಯಾನ ಜಾರಿಗೊಳಿಸಲು 9 ತಿಂಗಳ ಕಾಲ ಪ್ರಯತ್ನ ಮಾಡಿ ಯಶಸ್ಸು ಗಳಿಸಿದೆ ಎಂದು ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಭಿಯಾನಯನ್ನು ವಿಪಕ್ಷ ನಾಯಕರು, ವಿಧಾನಪರಿಷತ್ ಸದಸ್ಯರು ಸ್ವಾಗತಿಸಿದ್ದಾರೆ. ಆದರೆ ಎನ್.ಮಹೇಶ್ ಅವರು ಬಿ-ಖಾತೆ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಬಿಜೆಪಿ ಇ-ಖಾತೆ ಬಗ್ಗೆ ಸದನ ವಿರೋಧಿಸುತ್ತದೆ ಎನ್ನುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಅನಧಿಕೃತ ಆಸ್ತಿಗಳು ರಾಜ್ಯದ ಉದ್ದಗಲಕ್ಕೂ ಇದೆ. ಸುಮಾರು 57 ಲಕ್ಷ ಆಸ್ತಿಗಳಿಗೆ ರಾಜ್ಯ ಸರ್ಕಾರ ಇ- ಖಾತೆ ಪಡೆಯಲು ಅವಕಾಶ ನೀಡಿದೆ. ಇದರಿಂದ ರಾಜ್ಯಕ್ಕೆ ಹೊಸ ಶಕ್ತಿ ನೀಡಿದೆ. ಮುಖ್ಯಮಂತ್ರಿ ಈ ಆಸ್ತಿಗಳಿಗೆ ಸಾಲ ಸೌಲಭ್ಯ ಸಿಗುತ್ತದೆ ಎಂದು ಹೇಳಿದ್ದಾರೆ. ಎನ್.ಮಹೇಶ್ ಅವರ ಹೇಳಿಕೆಗಳನ್ನು ಯಾರು ನಂಬ ಬಾರದರು. ಇ-ಖಾತೆ ವಿಚಾರವನ್ನು ತಪ್ಪಾಗಿ ಅರ್ಥೈಸಲಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಡವರಿಗಾಗಿ ಸರ್ಕಾರ ನೀಡಿರುವ ಇ-ಖಾತೆ ಅಭಿಯಾನ ಸದುಪಯೋಗವಾಗಬೇಕು. ಎನ್.ಮಹೇಶ್ ಈ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲಿ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎ.ಪಿ.ಶಂಕರ್, ನಗರಸಭೆ ಸದಸ್ಯ ರಾಘವೇಂದ್ರ, ಜಿ.ಪಿ.ಶಿವಕುಮಾರ್, ಮಂಜುನಾಥ್, ಪ್ರಕಾಶ್ ಶಂಕನಪುರ, ನಗರಸಭೆ ಮಾಜಿ ಅಧ್ಯಕ್ಷ ಎಸ್.ರಮೇಶ್, ತಾಲೂಕು ಗ್ಯಾರಂಟಿ ಯೋಜನೆಗಳ ಅನಿಷ್ಠಾನ ಸಮಿತಿ ಉಪಾಧ್ಯಕ್ಷ ಬಸ್ತೀಪುರ ರವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net