ಬಿಡಿಎ ನೂತನ ಆಯುಕ್ತರಾಗಿ ಎನ್.ಜಯರಾಮ್ ಅಧಿಕಾರ ಸ್ವೀಕಾರ

jairam
Published on

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೂತನ ಆಯುಕ್ತರಾಗಿ ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಮ್ ಮಂಗಳವಾರ ಅಧಿಕಾರ ಸ್ವೀಕರಿಸಿದರು.

ಮಧ್ಯಾಹ್ನ ಬಿಡಿಎ ಕೇಂದ್ರ ಕಚೇರಿಗೆ ಆಗಮಿಸಿದ ಎನ್.ಜಯರಾಮ್ ಅವರು ಆಡಳಿತ ನಿಯಮಾವಳಿ ಪ್ರಕಾರ ಕಡತಕ್ಕೆ ಸಹಿ ಹಾಕಿ ಹೊಸ ಹುದ್ದೆಯನ್ನು ಹೊಣೆಯನ್ನು ವಹಿಸಿಕೊಂಡರು. ಈ ವೇಳೆ ಅವರನ್ನು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಬಿಡಿಎ ನೌಕರರ ಸಂಘದ ಪದಾಧಿಕಾರಿಗಳು ಕೂಡ ಹೊಸ ಆಯುಕ್ತರನ್ನು ಭೇಟಿ ಮಾಡಿ ಶುಭಾಶಯ ತಿಳಿಸಿದರು.

ಅಧಿಕಾರ ವಹಿಸಿಕೊಂಡ ಬಳಿಕ ನೂತನ ಆಯುಕ್ತರು ಪ್ರಾಧಿಕಾರದ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳ ಪರಿಚಯ ಮಾಡಿಕೊಂಡು ಬಿಡಿಎ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆದರು. ಒಂದೆರಡು ದಿನಗಳಲ್ಲಿ ಪೂರ್ಣ ಪ್ರಮಾಣದ ಅಧಿಕಾರಿಗಳ ಸಭೆ ನಡೆಸಿ ಬಿಡಿಎ ಆಡಳಿತ ಹಾಗೂ ಯೋಜನೆಗಳ ಪರಾಮರ್ಶೆ ನಡೆಸಲು ಎನ್.ಜಯರಾಮ್ ನಿರ್ಧರಿಸಿದ್ದಾರೆ.

ನಿಕಟಪೂರ್ವ ಆಯುಕ್ತ ಜಿ.ಕುಮಾರ್ ನಾಯಕ್ ಅವರ ವಯೋನಿವೃತ್ತಿ ಹಿನ್ನೆಲೆಯಲ್ಲಿ ತೆರವಾಗಿದ್ದ ಆಯುಕ್ತ ಹುದ್ದೆಗೆ ಎನ್.ಜಯರಾಮ್ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net