

ಮಂಡ್ಯ: ಇದು ದೇವೇಗೌಡರ ಕಾಲ ಅಲ್ಲ, ಇದು ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ಕಾಲ, ಅವರ ಕಾಲಕ್ಕೇ ಸೆಕ್ಯೂಲರ್ ಮುಗಿಯಿತು ಎಂದು ಜೆಡಿಎಸ್ ವಿರುದ್ಧ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜ್ಯಾತ್ಯಾತೀತ ಅನ್ನೋದು ಇದ್ರೆ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಅವರು ವೋಟ್ ಹಾಕಲಿ, ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇದ್ದಾಗ ಸಿಎಂ ಸ್ಥಾನ ಕಳೆದುಕೊಂಡ ಮೇಲೆ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ.ಸಭಾಪತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನ ಕೆಳಗಿಳಿಸಿ, ಬಸವರಾಜ್ ಹೊರಟ್ಟಿಯನ್ನ ಸಭಾಪತಿ ಮಾಡಿಕೊಂಡಿದ್ದು, ಹಾಗೇ ಮಂಡ್ಯದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷಗಿರಿವರೆಗೆ ಬಿಜೆಪಿ ಜೊತೆ ಕೈ ಜೋಡಿಸಿದಾಗ ಅವಾಗೆಲ್ಲಾ ರೇವಣ್ಣ ಅವರಿಗೆ ಸೆಕ್ಯೂಲರ್ ನೆನಪಾಗಿಲ್ಲ ಪಾಪ ಎಂದು ಹೇಳಿದರು.
ಇವತ್ತು ಸೆಕ್ಯೂಲರ್ ಅಂತ ಮಾತನಾಡ್ತಾರೆ.ಕಾಂಗ್ರೆಸ್ ಬಗ್ಗೆ ಎಷ್ಟು ಸಲ ಲಘುವಾಗಿ ಮಾತನಾಡಿದ್ದಾರೆ.ಮಂಡ್ಯ, ಮೈಸೂರು, ಹಾಸನ ಬಿಟ್ಟು ತುಮಕೂರಿಗೆ ಹೋದರು,ದೇವೇಗೌಡರಿಗೋಸ್ಕರ ನಮ್ಮ ಪಕ್ಷದ ನಾಯಕರು ಅವಕಾಶ ಕೊಟ್ಟರೂ ಅಲ್ಲಿ, ಇಲ್ಲಿ ಎಲ್ಲಾ ಕಡೆ ಸೋತಿದ್ದಾರೆ ಎಂದು ನಿಖಿಲ್ ಹಾಗೂ ದೇವೇಗೌಡ ವಿರುದ್ಧವೂ ಅಸಮಾಧಾನ ಹೊರಹಾಕಿದರು.
37 ಸ್ಥಾನ ಇದ್ದ ಜೆಡಿಎಸ್ ಗೆ ಸಿಎಂ ಸ್ಥಾನವನ್ನ ಅವರ ಮನೆ ಹತ್ತಿರ ಹೋಗಿ ನಾವೇ ಕೊಟ್ಟಿದ್ದೀವಿ, ಬಿಜೆಪಿಗೆ ಅಧಿಕಾರ ಕೊಡಬಾರದು ಅಂತ ನಾವೇ ಅವರ ಮನೆಗೆ ಹೋಗಿದ್ದೆವು. ಅವರೇನು ಕೇಳಿಲ್ಲ ನಾವೇ ಒಪ್ಪಿಕೊಳ್ತೀವಿ.ಆದ್ರೆ ಎಲ್ಲ ಕಡೆ ಕಾಂಗ್ರೆಸ್ ಜೆಡಿಎಸ್ ಗೆ ಅವಕಾಶ ಮಾಡಿಕೊಟ್ಟಿದ್ದರು.ಸಿಎಂ ಸ್ಥಾನದಿಂದ ಕುಮಾರಸ್ವಾಮಿ ಕೆಳಗಿಳಿದ ಮೇಲೆ ನಮ್ಮ ಸಭಾಪತಿಯನ್ನೂ ಕೆಳಗೆ ಇಳಿಸಿದರು. ಮಂಡ್ಯದಲ್ಲಿ 8 ಜನ ಡಿಸಿಸಿ ಬ್ಯಾಂಕ್ ನಲ್ಲಿ ಗೆದ್ದವರನ್ನ ತಪ್ಪಿಸಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ ಎಂದರು.
ನಮ್ಮದು ಏನಿದೆ ತಪ್ಪು?
ಕಾಂಗ್ರೆಸ್ ನಿಂದ ಒಡನಾಟ ಇಟ್ಟುಕೊಂಡಿದ್ದೇವೆ. ಜ್ಯಾತ್ಯಾತೀತ ಅನ್ನೋದು ಇದ್ರೆ ಬಹುಶಃ ಕಾಂಗ್ರೆಸ್ಗೆ ಸಪೋರ್ಟ್ ಮಾಡ್ತಿದ್ರು.
ಬಿಜೆಪಿ ಪರ ಜಾಸ್ತಿ ಜೆಡಿಎಸ್ನವರು ಮಾತನಾಡ್ತಿದ್ದಾರೆ.ಇವತ್ತು ಅಭ್ಯರ್ಥಿ ಹಾಕಿ, ಜ್ಯಾತ್ಯಾತೀತವಾಗಿ ಮತ ಹಾಕಬೇಕು ಅಂದರೆ ಇವರಿಗೆ ಯಾವ ನೈತಿಕತೆ ಇದೆ. ಇನ್ನೂ ಕಾಲ ಮಿಂಚಿಲ್ಲ, ಕಾಂಗ್ರೆಸ್ ಪರವಾಗಿ ಅವರು ವೋಟ್ ಹಾಕಲಿ ಎಂದರು. (ದಿಗ್ವಿಜಯ ನ್ಯೂಸ್)