ವಿಜ್ಞಾನ, ಅಧ್ಯಾತ್ಮ ಸಂಯೋಗವೇ ದೇವಿಪುರಾಣ ಎಂದ ಡಾ.ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯರು

Maski Religious Meeting
ಮಸ್ಕಿಯ ಭ್ರಮರಾಂಬ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಸಭೆಯಲ್ಲಿ ಡಾ.ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯರು ಬುಧವಾರ ಸಂಜೆ ಮಾತನಾಡಿದರು.
Published on

ಮಸ್ಕಿ: ದೇವಿ ಪುರಾಣದಲ್ಲಿ ವಿಜ್ಞಾನ ಮತ್ತು ಅಧ್ಯಾತ್ಮದ ಸಂಯೋಜನೆಯಾಗಿದ್ದು, ಮನುಷ್ಯನ ಸಾಮಾಜಿಕ ಬದುಕಿನಲ್ಲಿ ವೈಯಕ್ತಿಕ ಸಾಧನೆಗೆ ಈ ಪುರಾಣದ ಅಧ್ಯಯನ ದಾರಿ ದೀಪವಾಗಿದೆ ಎಂದು ವೀರಾಪುರ ಹಿರೇಮಠದ ಡಾ.ಮರುಳಸಿದ್ಧ ಪಂಡಿತರಾಧ್ಯ ಶಿವಾಚಾರ್ಯರು ಪ್ರತಿಪಾದಿಸಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ವಿಶೇಷ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಚಿದಾನಂದ ಅವಧೂತರು ದೇವಿಯನ್ನು ಸಾಕ್ಷಾತ್ಕರಿಸಿಕೊಂಡು ದೇಹದ ರಚನೆ, ಅವುಗಳ ಕಾರ್ಯ ವಿಧಾನಕ್ಕೆ ಉಸಿರಾಟದ ಮಹತ್ವ ಮತ್ತು ಅಧ್ಯಾತ್ಮ ಸಾಧನೆಗೆ ಬೇಕಾದ ತಂತ್ರಗಳನ್ನು ದೇವಿ ಪುರಾಣದಲ್ಲಿ ತಿಳಿಸಿದ್ದಾರೆ. ಮನುಷ್ಯ ತನ್ನಲ್ಲಿರುವ ಜಾಗೃತ ಶಕ್ತಿಯನ್ನು ಕ್ರೂಡೀಕರಿಸಿಕೊಂಡು ಸಾಧನೆ ಮಾಡಿದರೆ ನುಡಿದಂತೆ ನಡೆಯುವ ಪ್ರಕ್ರಿಯೆ ಆರಂಭವಾಗುತ್ತದೆ. ಅದಕ್ಕೆ ದೈವತ್ವದ ಪರಿಕಲ್ಪನೆ ಮೂಡುತ್ತದೆ ಎಂದರು.

ಪ್ರತಿಯೊಬ್ಬರೂ ಯಾವುದೇ ಕೆಲಸ ಯಶಸ್ವಿಯಾಗಬೇಕಾದರೆ ಇಚ್ಛಾಶಕ್ತಿ, ಕ್ರಿಯಾಶಕ್ತಿ, ಜ್ಞಾನ ಶಕ್ತಿಗಳು ಒಗ್ಗೂಡಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದರು. ಮಸ್ಕಿ ಗಚ್ಚಿನ ಹಿರೇಮಠದ ಶ್ರೀವರರುದ್ರಮುನಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಅಂಕುಶದೊಡ್ಡಿಯ ಶ್ರೀವಾಮದೇವ ಶಿವಾಚಾರ್ಯರು, ನಂದಿಕೇಶ್ವರದ ಶಿವಾಚಾರ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net