ಸೈನಿಕರಿಗೆ ಸಮಾಜ ಸದಾ ಋಣಿ ಆಗಿರಲಿ

May the society always be indebted to the soldiers
ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಿವೃತ್ತ ಯೋಧ ಕಾಸೀಮಸಾಬ ತಾರಗರ್​ ಅವರನ್ನು ಗೌರವಿಸಲಾಯಿತು. ಶಿವು ಹತ್ತಿ, ಎಚ್​.ಬಿ.ಚಿಂಚೋಳ್ಳಿ, ಮುರಗೆಪ್ಪಗೌಡ ರದ್ದೇವಾಡಗಿ, ಸಿದ್ಧನಗೌಡ ಪಾಟೀಲ, ಮೋದಿನ ಶಾಬಾದಿ, ಬಸವರಾಜ ಮಾರಲಭಾವಿ, ಡಾ.ಪ್ರಶಾಂತ ಬಮ್ಮಣ್ಣಿ ಇತರರಿದ್ದರು.
Published on

ಬ್ರಹ್ಮದೇವನಮಡು: ಸೈನಿಕರು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುವುದರಿಂದ ನಾವು ದೇಶದೊಳಗೆ ನೆಮ್ಮದಿಯಿಂದ ಬದುಕುತ್ತಿದ್ದೇವೆ ಎಂದು ಕಾಂಗ್ರೆಸ್​ ಮುಖಂಡ ಶಿವು ಹತ್ತಿ ಹೇಳಿದರು.

ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮಕ್ಕೆ ನಿವೃತ್ತರಾಗಿ ಆಗಮಿಸಿದ ಯೋಧ ಕಾಸೀಮಸಾಬ ತಾರಗರ್​ ಅವರನ್ನು ಭಾನುವಾರ ಸನ್ಮಾನಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೈನಿಕರು ಗಡಿ ಕಾಯುವ ಕೆಲಸದೊಂದಿಗೆ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿಯೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಸಮಾಜ ಸದಾ ಋಣಿಯಾಗಿರಬೇಕು ಎಂದರು.

ಸುದೀರ್ 22 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಭಾನುವಾರ ಗೋಲಗೇರಿ ಗ್ರಾಮಕ್ಕೆ ಆಗಮಿಸಿದ ಯೋಧ ಕಾಸೀಮಸಾಬ್​ ಅಲ್ಲಿಸಾಬ ತಾರಗರ್​ ಅವರನ್ನು ಗ್ರಾಮಸ್ಥರಿಂದ ಆತ್ಮೀಯವಾಗಿ ಗೌರವಿಸಲಾಯಿತು.

ನಿವೃತ್ತ ಯೋಧ ಕಾಸೀಮಸಾಬ್​ ತಾರಗರ್​ ಸನ್ಮಾನ ಸ್ವೀಕರಿಸಿ ಮಾತನಾಡಿ, ಛತ್ತಿಸ್​ಗಡ, ಕಾಶ್ಮೀರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಅರುಣಾಚಲ ಹರಿಯಾಣ ಸೇರಿ ಎಲ್ಲ ಗಡಿ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ನಿವೃತ್ತಿ ನಂತರ ಗೋಲಗೇರಿಗೆ ಆಗಮಿಸಿದಾಗ ಜನರು ತೋರಿಸುತ್ತಿರುವ ಅಭಿಮಾನದಿಂದ ನನಗೆ ಹೆಮ್ಮೆ ಆಗುತ್ತಿದೆ ಎಂದರು.

ಮುಖಂಡರಾದ ಎಚ್​.ಬಿ.ಚಿಂಚೋಳ್ಳಿ, ಮುರಗೆಪ್ಪಗೌಡ ರದ್ದೇವಾಡಗಿ, ಸಿದ್ಧನಗೌಡ ಪಾಟೀಲ, ಶ್ರೀಶೈಲ ಜಾಲವಾದಿ, ಮೋದಿನ ಶಾಬಾದಿ ಮಾತನಾಡಿದರು.

ಪ್ರಮುಖರಾದ ಬಸವರಾಜ ಮಾರಲಭಾವಿ, ಡಾ.ಪ್ರಶಾಂತ ಬಮ್ಮಣ್ಣಿ, ಶಂಕ್ರೆಪ್ಪಸಾಹು ಯಂಕಂಚಿ, ನಿಂಗನಗೌಡ ಢವಳಾರ, ಶರಣಗೌಡ ಪಾಟೀಲ ಡಂಬಳ, ಮಾಂತೇಶ ಸಾತಿಹಾಳ, ರಾಜೇಸಾಬ ಮೊಕಾಸಿ, ಅಲ್ಲಾಭ ಹುಂಡೇಕಾರ, ಬಸವರಾಜ ಹದಗಲ್​, ಪತ್ರಕರ್ತ ಮಲ್ಲು ಕೆಂಭಾವಿ, ದವಲಸಾಬ ಬನ್ನೆಟ್ಟಿ, ಮಡು ನಾಯ್ಕೋಡಿ, ಚಂದ್ರು ಕೆಂಭಾವಿ, ಬಾಬು ಜಾಲವಾದಿ, ಕುಮಾರ ಗೊಂದಳಿ, ಮೈಬೂಬ ದೊಡ್ಡಮನಿ, ಗೊಲ್ಲಾಳ ಬೈಚಬಾಳ, ಮಹೇಶ ಹತ್ತಿ, ಎಚ್​.ಎಚ್​.ಚೌಧರಿ, ಯಾಜ್​ ಬಾಗವಾನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net