ಮುರುಗೇಂದ್ರ ಶಿವಯೋಗಿಗಳ ಪುರಾಣ

Mythology of Murugendra Shivayogis
ಮುರುಗೇಂದ್ರ ಶ್ರೀಗಳು
Published on

ತಿಕೋಟಾ: ತಾಲೂಕಿನ ಕೋಟ್ಯಾಳ ಗ್ರಾಮದ ಮುಕ್ತಾಂಕಾರಮಠದಲ್ಲಿ ಆಗಸ್ಟ್​ 5 ರಿಂದ ಅಥಣಿಯ ಜಂಗಮ ಜ್ಯೋತಿ ಮುರುಗೇಂದ್ರ ಶಿವಯೋಗಿಗಳ ಪುರಾಣ ನಡೆಯಲಿದೆ.

ಹೊನವಾಡದ ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜರು ಪ್ರತಿದಿನ ಸಂಜೆ 8 ಗಂಟೆಗೆ ಕಾರ್ಯಕ್ರಮ ನಡೆಸಿಕೊಡುವರು. ವೇ.ಮೂ.ಶಿವಯ್ಯ ಹಿರೇಮಠ ಸಾನ್ನಿಧ್ಯ ವಹಿಸುವರು.

ಕಾಶಿನಾಥ ಕುಂಬಾರ, ಬೇಬಕ್ಕ ಕುಂಬಾರ ಸಮ್ಮುಖ ವಹಿಸುವರು. ಸರದಾರ ಜಂಬಗಿ, ರಾಮಗೂಂಡ ರಾಮತೀರ್ಥ, ರಾಜಕುಮಾರ ಗದ್ಯಾಳ ಹಾಗೂ ಗ್ರಾಮದ ಶರಣ, ಶರಣೆಯರು ಭಾಗವಹಿಸುವರು ಎಂದು ಮುಕ್ತಾಂಕಾರಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net