ಶಿಕ್ಷಕರು, ಹಳೆಯ ವಿದ್ಯಾರ್ಥಿಗಳ ಸಮಾಗಮ

ಲಂಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರು ವಂದನೆ
ಲಂಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಸರಗೂರು ತಾಲೂಕು ಲಂಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪಶುಪತಿ, ಗಜೇಂದ್ರ, ಬಂಗಾರ ನಾಯಕ, ಪ್ರಭು ಕುಮಾರ್, ಶ್ವೇತಾ, ಬಂಗಾರ, ಶಿವಲಿಂಗಪ್ಪ, ಪ್ರಭು ಕುಮಾರ್ ಇದ್ದರು.
Published on: 

ಸರಗೂರು: ಲಂಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ 1992ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಗುರು ವಂದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶಿಕ್ಷಕರನ್ನು ಗ್ರಾಮದಲ್ಲಿ ಕಲಾತಂಡಗಳೊಂದಿಗೆ ಮೆರವಣಿಗೆ ಮಾಡಿ ವೇದಿಕೆಗೆ ಕರೆತಂದರು. ಶಿಕ್ಷಕರು ತಮ್ಮ ಸೇವಾ ಅವಧಿಯ ನೆನಪುಗಳನ್ನು ಬಿಚ್ಚಿಟ್ಟರೆ, ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು.

ಶಿಕ್ಷಕ ಪಶುಪತಿ ಮಾತನಾಡಿ, ನಾವು ಸೇವೆ ಸಲ್ಲಿಸಿದ ಶಾಲೆಯ ಹಳೆಯ ವಿದ್ಯಾರ್ಥಿಗಳು ಇಂದು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವುದು ನಮ್ಮಂತಹ ಶಿಕ್ಷಕರಿಗೆ ಹೆಮ್ಮೆಯ ಸಂಗತಿ. ಶಿಕ್ಷಕರಾಗಿ ಕೆಲಸ ಮಾಡಿದ ಅವಧಿಯ ನೆನಪುಗಳು ಎಂದಿಗೂ ಮರೆಯಲಾಗದು ಎಂದು ಹೇಳಿದರು.

ಅಂದು ನಾವು ಎದುರಿಸಿದ ಸಮಸ್ಯೆಗಳಿಗೆ ಹೋಲಿಸಿದರೆ ಇಂದು ಇಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಉತ್ತಮ ರಸ್ತೆ, ಸಾರಿಗೆ ವ್ಯವಸ್ಥೆ, ಕಟ್ಟಡ ಹಾಗೂ ಶಿಕ್ಷಣದ ಸೌಲಭ್ಯಗಳು ದೊರೆಯುತ್ತಿರುವುದನ್ನು ನೋಡಿದರೆ ಸಂತೋಷವಾಗುತ್ತದೆ. ಲಂಕೆ ಗ್ರಾಮದ ಶಾಲೆಯ ಬೆಳವಣಿಗೆಯಲ್ಲಿ ಶಿಕ್ಷಕರು ಹಾಗೂ ಗ್ರಾಮಸ್ಥರ ಪಾತ್ರ ಸ್ಮರಣೀಯ ಎಂದರು.

ಶಿಕ್ಷಕ ಗಜೇಂದ್ರ ಮಾತನಾಡಿ, ಆ ದಿನಗಳಲ್ಲಿ ಲಂಕೆ ಗ್ರಾಮಕ್ಕೆ ತಲುಪುವುದೇ ಒಂದು ಸಾಹಸವಾಗಿತ್ತು. ಬಸಾಪುರದಲ್ಲಿ ಇಳಿದು ಟ್ಯಾಕ್ಸಿ ಮಾಡಿಕೊಂಡು ಸರಗೂರಿಗೆ, ಅಲ್ಲಿಂದ ಬಸ್ ಮೂಲಕ ಹ್ಯಾಂಡ್‌ಪೋಸ್ಟ್‌ಗೆ ಬಂದು ಮತ್ತೆ ಟ್ಯಾಕ್ಸಿಯಲ್ಲಿ ಲಂಕೆಗೆ ತೆರಳಬೇಕಾಗಿತ್ತು. ಆಗಿನ ರಸ್ತೆಗಳ ಸ್ಥಿತಿ ಅಷ್ಟೊಂದು ಕಷ್ಟಕರವಾಗಿತ್ತು ಎಂದು ಹಳೆಯ ದಿನಗಳನ್ನು ಮೆಲುಕು ಹಾಕಿದರು.

ಶಿಕ್ಷಕರಾದ ಬಂಗಾರ ನಾಯಕ, ಪ್ರಭು ಕುಮಾರ್, ಮುಖ್ಯ ಶಿಕ್ಷಕಿ ಶ್ವೇತಾ, ಬಂಗಾರ, ಶಿವಲಿಂಗಪ್ಪ, ಪ್ರಭು ಕುಮಾರ್, ಗ್ರಾಪಂ ಮಾಜಿ ಸದಸ್ಯ ಲಂಕೆ ಶ್ರೀನಿವಾಸ, ಪುಟ್ಟಪ್ಪ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮರಿಲಿಂಗಯ್ಯ, ರಂಗಯ್ಯ, ಆರ್ಯ ಈಡಿಗ ಸಮಾಜದ ಮುಖಂಡ ಸೋಮಣ್ಣ, ಗುಡಿಗೌಡ ಶಿವಮಲ್ಲಪ್ಪ, ಹಿರಿಯ ವಿದ್ಯಾರ್ಥಿನಿ ಶೋಭಾ, ಶಿವಮೂರ್ತಿ, ಮಹದೇವ, ಬಸವರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net