ವಿಶ್ವಕರ್ಮ ಸಮಾಜಕ್ಕೆ ಪದಾಧಿಕಾರಿಗಳ ಆಯ್ಕೆ

ಸರಗೂರು ತಾಲೂಕು ವಿಶ್ವಕರ್ಮ ಸಮಾಜ
ಅಧ್ಯಕ್ಷರಾಗಿ ದಡದಹಳ್ಳಿ ಗ್ರಾಮದ ಡಿ.ಜಿ.ಮೂರ್ತಿ
ಸರಗೂರು ತಾಲೂಕು ವಿಶ್ವಕರ್ಮ ಸಮಾಜಕ್ಕೆ ಆಯ್ಕೆಯಾದ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಡಿ.ಜಿ.ಮೂರ್ತಿ, ಲಿಂಗಾಚಾರಿ, ಜಿ.ರವಿ, ರವಿಕುಮಾರ್, ನಟರಾಜ್, ಆನಂದ, ಸೋಮಾಚಾರಿ, ನಾಗರಾಜಾಚಾರಿ, ಸಿದ್ದಪ್ಪಾಜಿ ಇತರರಿದ್ದರು.
Published on: 

ಸರಗೂರು: ತಾಲೂಕು ವಿಶ್ವಕರ್ಮ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪಟ್ಟಣದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಭಾನುವಾರ ನಡೆಯಿತು.

ಅಧ್ಯಕ್ಷರಾಗಿ ದಡದಹಳ್ಳಿ ಗ್ರಾಮದ ಡಿ.ಜಿ.ಮೂರ್ತಿ, ಉಪಾಧ್ಯಕ್ಷರಾಗಿ ನಿವೃತ್ತ ಪಿಡಿಒ ಹಲಸೂರು ಲಿಂಗಾಚಾರಿ, ಗೌರವಾಧ್ಯಕ್ಷರಾಗಿ ಜಿ.ರವಿ, ಪ್ರಧಾನ ಕಾರ್ಯದರ್ಶಿಯಾಗಿ ಬಾಡಗ ಗ್ರಾಮದ ರವಿಕುಮಾರ್, ಖಜಾಂಚಿಯಾಗಿ ಸರಗೂರು ನಟರಾಜ್ ಅವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರಾಗಿ ಕಲ್ಲಂಬಾಳು ಆನಂದ, ಹೊಸಬಿರುವಾಳು ಸೋಮಾಚಾರಿ, ಬಡಬಲಪುರದ ನಾಗರಾಜಾಚಾರಿ, ಯಶವಂತಪುರದ ಸಿದ್ದಪ್ಪಾಜಿ, ಕಾಡಬೇಗೂರು ಗ್ರಾಮದ ನಾಗರಾಜಾಚಾರಿ, ಬಾಡಗ ಗ್ರಾಮದ ಪ್ರವೀಣ್ ಕುಮಾರ್, ಹೆಗ್ಗನೂರು ಗ್ರಾಮದ ಮೋಹನ್ ಕುಮಾರ್, ಸಿದ್ದಪ್ಪಾಜಿ, ಚೆಕ್ಕೂರು ಗ್ರಾಮದ ಕೆಂಡಗಣಸ್ವಾಮಿ, ಕೊತ್ತೇಗಾಲದ ಗೋಪಾಲ್, ಶಾಂತಿನಿವಾಸದ ಸುರೇಶ್, ಬಿದರಹಳ್ಳಿ ಗ್ರಾಮದ ಸೋಮಾಚಾರಿ, ಅಗತ್ತೂರು ಗ್ರಾಮದ ಚೆಲುವಾಚಾರ್, ಹಲಸೂರಿನ ಗೋವಿಂದಾಚಾರಿ, ಹಳಿಯೂರು ಗ್ರಾಮದ ಕೃಷ್ಣಾಚಾರ್, ಕಂದೇಗಾಲ ಗ್ರಾಮದ ಕಾಂತರಾಜಾಚಾರಿ, ಕಾಟವಾಳು ಗ್ರಾಮದ ಗಣೇಶಾಚಾರಿ, ಸರಗೂರು ನಾಗರಾಜು, ನಾಗರಾಜು ಹಾಗೂ ಲೋಕೇಶ್ ಅವಿರೋಧ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಮುಳ್ಳೂರು ಗೋವಿಂದಾಚಾರ್, ಲಯನ್ಸ್ ಸಂಸ್ಥೆಯ ಪ್ರಿನ್ಸಿಪಾಲ್ ದಾಸಾಚಾರ್, ತಾಲೂಕು ವಿಶ್ವಕರ್ಮ ಯುವ ಬ್ರಿಗೇಡ್ ಕಾರ್ಯದರ್ಶಿ ಲೋಕೇಶ್, ಬಾಡಗ ಗ್ರಾಮದ ಕೃಷ್ಣಾಚಾರಿ, ಪ್ರಭುಸ್ವಾಮಿ, ಬಸವರಾಜು, ಪ್ರದೀಪ್ ಕುಮಾರ್, ಡಿ.ಎಸ್.ಬಸವರಾಜು, ಪ್ರಸನ್ನ ಕುಮಾರ್, ಬಿ.ಕೆ.ಸುರೇಶ್, ಭಾನುಪ್ರಕಾಶ್, ಹಲಸೂರು ಮಹೇಶ್, ಸರಗೂರು ಬಸವರಾಜು, ಸಂತೋಷ್, ವಿಜಯ್ ಕುಮಾರ್, ಕದಂಬ, ಸತೀಶ್, ಗೋಪಾಲಾಚಾರಿ, ಶಿವಕುಮಾರ್, ರಾಜೇಶ್, ಬಂಕವಾಡಿ ವೆಂಕಟಪ್ಪಾಚಾರಿ, ಶ್ರೀನಿವಾಸ, ವೆಂಕಟರಮಣಾಚಾರಿ, ಕಾಂತರಾಜಾಚಾರಿ, ದಡದಹಳ್ಳಿ ಕೃಷ್ಣಾಚಾರಿ, ಗೋವಿಂದಾಚಾರಿ, ಮೊಳೆಯೂರು ಕೃಷ್ಣಾಚಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net