ಮೈಸೂರು: ವರುಣ ನಾಲೆಗೆ ಹಾರಿ ಆಟೋ ರಿಕ್ಷಾ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಗೆ ಕಾರಣ ತಿಳಿದು ಬಂದಿಲ್ಲ. ನಗರದ ನಿಂಗಯ್ಯನಕೆರೆ ನಿವಾಸಿ ಎನ್.ಸಂತೋಷ್ (36) ಮೃತ.
ಏಕಲವ್ಯನಗರದ ಬಳಿ ನಾಲೆಯಲ್ಲಿ ಭಾನುವಾರ ತೇಲಿ ಬರುತ್ತಿದ್ದ ಮೃತದೇಹವನ್ನು ನೋಡಿದ ಸಾರ್ವಜನಿಕರು, ನೀರಿನಿಂದ ಎತ್ತಿ ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಮೃತದೇಹ ರವಾನಿಸಿದರು. ಕುಟುಂದವರು ಗುರುತಿಸಿದರು.
ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದರು. ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.