ರಾಷ್ಟ್ರದ ಅಭಿವೃದ್ಧಿಗೆ ಶಿಕ್ಷಕರು, ಇಂಜಿನಿಯರ್ಸ್‌ ಸೇವೆ ಅಮೂಲ್ಯ: ಡಾ. ನಾಗರಾಜ್ ವಿ. ಬೈರಿ ಬಣ್ಣನೆ

ಶಿಕ್ಷಕರ, ಇಂಜಿನಿಯರ್ಸ್‌ ದಿನಾಚರಣೆ

Services of teachers and engineers are invaluable for the nation's development: Dr. Nagaraj V. Bairi
ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ನಿಂದ ಆಯೋಜಿಸಿದ್ದ ಶಿಕ್ಷಕರ ಹಾಗೂ ಇಂಜಿನಿಯರ್ ದಿನಾಚರಣೆಯಲ್ಲಿ ಹಲವರನ್ನು ಸನ್ಮಾನಿಸಲಾಯಿತು. ಡಾ. ನಾಗರಾಜ್ ವಿ. ಬೈರಿ, ಮಹಾಬಲೇಶ್ವರ ಬೈರಿ, ಡಾ. ಬಿ.ಸಿ. ವಿಜಯಕುಮಾರ್, ಬಾಲಕೃಷ್ಣ ರಾಜು, ಗಂಗಾಧರಪ್ಪ, ಶಾಲಿನಿ ಬೈರಿ ಇತರರು ಇದ್ದರು.
Published on: 

ಮೈಸೂರು: ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ನಿಂದ ಶಿಕ್ಷಕರ ಹಾಗೂ ಇಂಜಿನಿಯರ್‌ಗಳ ದಿನ ಆಚರಿಸಲಾಯಿತು.

ಹೂಟಗಳ್ಳಿಯ ಅನಂತೇಶ್ವರ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಹಾಗೂ ರಾಷ್ಟ್ರದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳು ನೀಡುತ್ತಿರುವ ಅಮೂಲ್ಯ ಸೇವೆಯನ್ನು ಸ್ಮರಿಸಿ ಗೌರವಿಸಲಾಯಿತು.

ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಡಾ. ನಾಗರಾಜ್ ವಿ. ಬೈರಿ ಕಾರ್ಯಕ್ರಮ ಉದ್ಘಾಟಿಸಿ, ಶಿಕ್ಷಕರು ಜ್ಞಾನವನ್ನು ನೀಡಿ ಉತ್ತಮ ನಾಗರಿಕರನ್ನು ರೂಪಿಸಿದರೆ, ಇಂಜಿನಿಯರ್‌ಗಳು ತಮ್ಮ ಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರವನ್ನು ನಿರ್ಮಿಸುತ್ತಾರೆ ಎಂದು ಬಣ್ಣಿಸಿದರು.

ಜಿಲ್ಲಾ ಗವರ್ನರ್ ಮಹಾಬಲೇಶ್ವರ ಬೈರಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಬಿಆರ್‌ಪಿ ಡಾ. ಬಿ.ಸಿ. ವಿಜಯಕುಮಾರ್, ಅಲಯನ್ಸ್ ಕ್ಲಬ್ಸ್ ಬಾಲಕೃಷ್ಣರಾಜು, ಗಂಗಾಧರಪ್ಪ, ಶಾಲಿನಿ ಬೈರಿ ಇತರರು ಶಿಕ್ಷಕರು, ಇಂಜಿನಿಯರ್‌ಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಿ.ಮಹದೇವ್, ಸರೋಜಮ್ಮ, ವೆಂಕಟೇಶ್ ಚಿಕ್ಕಣ್ಣ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಎಸ್.ವೀರೇಶ್, ನಾಗಸುಂದರ ಅವರನ್ನು ಸನ್ಮಾನಿಸಲಾಯಿತು. ಶ್ರೀಶೈಲ, ಕೃಷ್ಣೋಜಿರಾವ್, ಶೋಭಾ ಸಿರಿ ಬಾಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net