ರಾಜ್ಯಮಟ್ಟಕ್ಕೆ ಟ್ಯಾಲೆಂಟ್ ಕಾಲೇಜು ತಂಡ

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ
ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಹುಣಸೂರು ನಗರದ ಟ್ಯಾಲೆಂಟ್ ಪಿಯು ಕಾಲೇಜು ತಂಡ. ಎಂ.ಟಿ.ಮಂಜುನಾಥ್, ಮಹದೇವ್, ಸುಧಾಕರ್, ಪ್ರಸನ್ನ, ಬಿ.ಕೆ.ಜಗದೀಶ್ ಇದ್ದಾರೆ.
ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿರುವ ಹುಣಸೂರು ನಗರದ ಟ್ಯಾಲೆಂಟ್ ಪಿಯು ಕಾಲೇಜು ತಂಡ. ಎಂ.ಟಿ.ಮಂಜುನಾಥ್, ಮಹದೇವ್, ಸುಧಾಕರ್, ಪ್ರಸನ್ನ, ಬಿ.ಕೆ.ಜಗದೀಶ್ ಇದ್ದಾರೆ. Talent College team advances to the state level.
Published on: 

ಹುಣಸೂರು: ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪದವಿಪೂರ್ವ ಕಾಲೇಜು ವಿಭಾಗದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಹುಣಸೂರು ನಗರದ ಟ್ಯಾಲೆಂಟ್ ಪಿಯು ಕಾಲೇಜು ತಂಡ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.

ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಮೈಸೂರು ತಾಲೂಕು ತಂಡವನ್ನು 2-0 ಅಂಕಗಳ ಅಂತರದಲ್ಲಿ ಸೋಲಿಸಿ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದೆ. ಕಾಲೇಜು ತಂಡದ ಸಾಧನೆಗೆ ಸಂಸ್ಥೆ ಕಾರ್ಯದರ್ಶಿ ಎಚ್.ಪಿ. ಮಂಜುನಾಥ್, ನವೀನ್ ರೈ, ಕೃಷ್ಣಮೂರ್ತಿ, ಡಾ. ಶ್ರೀನಾಥ್, ಆರ್.ಎನ್.ಮಂಜುನಾಥ್ ಹಾಗೂ ಪ್ರಾಂಶುಪಾಲ ಎಂ.ಟಿ.ಮಂಜುನಾಥ್ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net