ಮೈಸೂರಿನಲ್ಲಿ ವಿದೇಶಿಯರಿಗೆ ಕನ್ನಡ ಬಾವುಟ ವಿತರಣೆ

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ಕನ್ನಡ ರಾಜ್ಯೋತ್ಸವ ಆಚರಣೆ
Distribution of Kannada flags to foreigners in Mysuru
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ನಗರದ ಗೋಕುಲಂನಲ್ಲಿ ವಿದೇಶಿಯರು ಹಾಗೂ ನೆರೆ ರಾಜ್ಯಗಳಿಂದ ಆಗಮಿಸಿದವರೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವಿಕ್ರಂ ಅಯ್ಯಂಗಾರ್, ರಾಕೇಶ್‌ಭಟ್, ಜಯಸಿಂಹ ಶ್ರೀಧರ್, ಗಗನ್‌ಗೌಡ, ಅಮಿತ್, ರಾಜೇಶ್, ಸಚಿನ್‌ನಾಯಕ್ ಇತರರು ಇದ್ದರು.
Published on: 

ಮೈಸೂರು: ಕನ್ನಡ ರಾಜ್ಯೋತ್ಸವದ ಸಂಭ್ರಮದ ಅಂಗವಾಗಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‌ನಿಂದ ನಗರದ ಗೋಕುಲಂನಲ್ಲಿ ವಿದೇಶಿಯರು ಹಾಗೂ ನೆರೆ ರಾಜ್ಯಗಳಿಂದ ಆಗಮಿಸಿದವರಿಗೆ ಕನ್ನಡ ಬಾವುಟಗಳನ್ನು ವಿತರಿಸುವ ಮೂಲಕ ಕನ್ನಡ ಭಾಷೆ, ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವಿದೇಶಿಯರು ಹಾಗೂ ನೆರೆ ರಾಜ್ಯದ ಟೆಕ್ಕಿಗಳೊಂದಿಗೆ ಸಾಮೂಹಿಕವಾಗಿ ನಾಡಗೀತೆಯನ್ನು ಹಾಡುವ ಮೂಲಕ ಕನ್ನಡಾಭಿಮಾನ ಮೆರೆದರು. ಅಲ್ಲದೆ ಕರ್ನಾಟಕದ ನೆಲ, ಜಲ, ಕಲೆ, ಸಾಹಿತ್ಯ ಹಾಗೂ ಶ್ರೀಮಂತ ಸಂಸ್ಕೃತಿಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ಅಧ್ಯಕ್ಷ ರಾಕೇಶ್‌ಭಟ್, ಸಂಘಟನೆಯ ಜಯಸಿಂಹ ಶ್ರೀಧರ್, ಗಗನ್‌ಗೌಡ, ಅಮಿತ್, ರಾಜೇಶ್, ಸಚಿನ್‌ನಾಯಕ್ ಇತರರು ಇದ್ದರು.