ಬೆಲೆ ಏರಿಕೆ ಖಂಡಿಸಿ ಮೈಸೂರಿನಲ್ಲಿ ಖಾಲಿ ತಟ್ಟೆಗಳ ಪ್ರದರ್ಶನ

ಕನ್ನಡಾಂಬೆ ರಕ್ಷಣಾ ವೇದಿಕೆ ವಿನೂತನ ಪ್ರತಿಭಟನೆ
Empty plates displayed in Mysuru to protest against price hikes
ಹಾಲು, ಬಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ರಾಜಶೇಖರ್, ನಂಜುಂಡ, ಚೆನ್ನನಾಯಕ್, ಶಿವಕುಮಾರ್, ತಾರಾ, ಪರ್ವಿನ್ ತಾಜ್, ಕಮಲಾ, ಹೊನ್ನೇಗೌಡ, ಶಶಿಕಲಾ ಇತರರು ಇದ್ದರು. RAVI
Published on: 

ಮೈಸೂರು: ಹಾಲು, ಬಸ್ ದರ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಖಾಲಿ ತಟ್ಟೆಗಳನ್ನು ಪ್ರದರ್ಶಿಸುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

ನಗರದ ಜಿಲ್ಲಾಧಿಕಾರಿಗಳ ಹಳೇ ಕಚೇರಿ ಎದುರು ಕಾರ್ಯಕರ್ತರು, ಖಾಲಿ ತಟ್ಟೆಗಳನ್ನು ಪ್ರದರ್ಶಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಸರ್ಕಾರ ದಿಢೀರನೇ ಒಂದು ಲೀಟರ್ ಹಾಲಿಗೆ 8 ರಿಂದ 12 ರೂಪಾಯಿ ತನಕ ಬೆಲೆ ಏರಿಕೆ ಮಾಡಿರುವುದು ಜನಸಾಮಾನ್ಯರಿಗೆ ಹೊರೆಯಾಗಿದೆ ಎಂದು ದೂರಿದರು.

ಹಾಲು, ಬಸ್ ಪ್ರಯಾಣ ಏರಿಕೆ ಜತೆಗೆ ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್, ಸಕ್ಕರೆ, ತೊಗರಿ ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಹಲವು ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಕ್ಕಿಯ ಬೆಲೆ 100 ರೂ ತಲುಪಿದೆ. ಆದರೆ, ಜನ ಸಾಮಾನ್ಯರ ಆದಾಯ ಮಾತ್ರ ಹೆಚ್ಚದೆ ಮಧ್ಯಮ, ಬಡ ಜನರು ತತ್ತರಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ:

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಸರ್ಕಾರಗಳು ಜನರ ಆದಾಯ ಹೆಚ್ಚಿಸುವ ಯಾವುದೇ ಕಾರ್ಯಕ್ರಮಗಳನ್ನು ರೂಪಿಸದೆ, ಮನಬಂದಂತೆ ಬೆಲೆ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಕಿಡಿ ಕಾರಿದರು. ಸರ್ಕಾರ ಕೂಡಲೇ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಕೆ ಮಾಡಬೇಕು. ಇಲ್ಲದಿದ್ದಲ್ಲಿ ನಾವು ನಿರಂತರವಾಗಿ ಸರ್ಕಾರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.

ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯ ಖಜಾಂಚಿ ನಂಜುಂಡ, ಸಹ ಕಾರ್ಯದರ್ಶಿ ಚೆನ್ನನಾಯಕ್, ಕಾರ್ಯದರ್ಶಿ ಶಿವಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ತಾರಾ, ಉಪಾಧ್ಯಕ್ಷರಾದ ಪರ್ವಿನ್ ತಾಜ್, ಕಮಲಾ, ಹೊನ್ನೇಗೌಡ, ಶಶಿಕಲಾ, ಇಂದ್ರಮ್ಮ, ಪದ್ಮಾವತಿ, ಶಶಿಕುಮಾರಿ, ಮುಖಂಡರಾದ ಮಹೇಶ್, ಶಿವಲಿಂಗಪ್ಪ, ಬೆಟ್ಟೇಗೌಡ, ಚಿನ್ನಪ್ಪಾಚಾರಿ, ದೊರೆಸ್ವಾಮಿ, ಕಿಕ್ಕೇರಿ ಕಿರಣ, ಹರೀಶ, ವತ್ಸಲ, ವಿದ್ಯಾ, ರಶ್ಮಿ, ಮಹಾಲಕ್ಷ್ಮೀ, ಸೋಮಶೇಖರ, ಮಹೇಶ ಇತರರು ಇದ್ದರು.