

ಹುಣಸೂರು : ನಗರದ ಜನತಾ ಕಾಲನಿಯ ಗುಜರಿ ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟಿವೆ.
ನಗರದ ಲೀಲಾ ಚಿತ್ರಮಂದಿರದ ಹಿಂಭಾಗದ ಜನತಾ ಕಾಲನಿಯ ಮುಯೀನ್ ಅವರ ಗುಜರಿ ಅಂಗಡಿಯಲ್ಲಿ ಮಂಗಳವಾರ ತಡರಾತ್ರಿ ಅವಘಡ ಸಂಭವಿಸಿದೆ. ಮರಗೆಲಸ ಮಾಡುತ್ತಿದ್ದ ಮುಯಿನ್ ಶೆಡ್‌ನಲ್ಲಿದ್ದ ಯಂತ್ರಗಳಿಗೆ ಪೂಜೆ ಮಾಡಿ ಮನೆಗೆ ತೆರಳಿದ್ದರು.
ರಾತ್ರಿ ದಟ್ಟಹೊಗೆ ಆವರಿಸಿಕೊಂಡಿದ್ದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗದೆ, ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.