ಬಹುಜನ ಸಮುದಾಯ ಅಧಿಕಾರ ಹಿಡಿದಲ್ಲಿ ಪ್ರಜಾಪ್ರಭುತ್ವಕ್ಕೆ ಮಹತ್ವ

Democracy gains significance if the Bahujan community assumes power.
ಹುಣಸೂರು ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಬಿಎಸ್‌ಪಿ ಪಕ್ಷದ ಸಭೆಯಲ್ಲಿ ರಾಜ್ಯ ಉಸ್ತುವಾರಿ ಪ್ರಮುಖ ಆ.ರಾ.ಮಹೇಶ್ ಮಾತನಾಡಿದರು. ಭರತ್‌ಕುಮಾರ್ ಗೌಡ,. ಕೃಷ್ಣ ಇತರರಿದ್ದರು.
ಹುಣಸೂರು ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಬಿಎಸ್‌ಪಿ ಪಕ್ಷದ ಸಭೆಯಲ್ಲಿ ರಾಜ್ಯ ಉಸ್ತುವಾರಿ ಪ್ರಮುಖ ಆ.ರಾ.ಮಹೇಶ್ ಮಾತನಾಡಿದರು. ಭರತ್‌ಕುಮಾರ್ ಗೌಡ,. ಕೃಷ್ಣ ಇತರರಿದ್ದರು.
Published on

ಹುಣಸೂರು: ಬಹುಜನ ಸಮುದಾಯಗಳು ರಾಜಕೀಯ ಅಧಿಕಾರ ಪಡೆದಾಗ ಮಾತ್ರ ಬಹುಜನರ ಅಭಿವೃದ್ಧಿ ಸಾಧ್ಯವೆಂದು ಬಹುಜನ ಸಮಾಜವಾದಿ ಪಕ್ಷದ ರಾಜ್ಯ ಉಸ್ತುವಾರಿ ಪ್ರಮುಖ ಆ.ರಾ.ಮಹೇಶ್ ಅಭಿಪ್ರಾಯಪಟ್ಟರು.

ನಗರದ ಡೀಡ್ ಸಂಸ್ಥೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ತಾಲೂಕು ಘಟಕದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಬಹುಜನ ಸಮುದಾಯಗಳು ಕೇವಲ ವೋಟು ಹಾಕಿದರೆ ಸಾಲದು. ಅವರೂ ಅಧಿಕಾರ ಹಿಡಿದು ಆಡಳಿತ ನಡೆಸಬೇಕು. ಹಾಗಾದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಮಹತ್ವ ಬರುತ್ತದೆ. ಬಹುಜನರ ಉದ್ದಾರ ಸಾಧ್ಯವಾಗುತ್ತದೆ. ಭಾರತದಲ್ಲಿ ಹಲವು ರಾಷ್ಟ್ರೀಯ ಪಕ್ಷಗಳಿದ್ದರೂ ಬಿಜೆಪಿ ಮೊದಲ ಸ್ಥಾನದಲ್ಲಿ, ಎರಡನೇ ಸ್ಥಾನದಲ್ಲಿ ಕಾಂಗ್ರೆಸ್, ಮೂರನೇ ಸ್ಥಾನದಲ್ಲಿ ಬಹುಜನ ಸಮಾಜವಾದಿ ಪಕ್ಷ ಇದೆ. ಈ ಮೂರರಲ್ಲಿ ಮೊದಲೆರಡು ಮೇಲ್ವರ್ಗದ ಬ್ರಾಹ್ಮಣ ಮತ್ತು ಬನಿಯ ಸಮುದಾಯಗಳ ಹಿತರಕ್ಷಕರು ಹಾಗೂ ತತ್ವ ಆದರ್ಶ ಪಾಲಕರು. ಶೇಕಡಾ 85 ಭಾಗವಿರುವ ಬಹುಜನ ಸಮುದಾಯಗಳ ಹಿತ ಕಾಯಲು ಅವರದೇ ನಾಯಕತ್ವ ಹೊಂದಿ ಆಡಳಿತ ನಡೆಸುವ ಪಕ್ಷ ಎಂದರೆ ಅದು ಬಿಎಸ್ಪಿ ಮಾತ್ರ. ಇದಕ್ಕೆ ಬಾಬಾ ಸಾಹೇಬರ ಸಮತಾ ತತ್ವ ಮತ್ತು ಸಂವಿಧಾನವೇ ಮಾರ್ಗದರ್ಶಕ ಸೂತ್ರ ಎಂದರು.

ಇದನ್ನು ಬಲವಾಗಿ ಪ್ರತಿಪಾದಿಸಲು ಪಕ್ಷದ ಸಂಸ್ಥಾಪಕರು ಕಾನ್ಷಿರಾಮ್‌ಜಿ ತಮ್ಮ ಜೀವನವನ್ನು ಮುಡಿಪಿಟ್ಟರು. ಅವರನ್ನು ಸ್ಮರಿಸಲು ಅವರ ಹುಟ್ಟುಹಬ್ಬವನ್ನು ಸಂಕಲ್ಪ ದಿನವನ್ನಾಗಿ ಆಚರಿಸಲಿದ್ದೇವೆ. ಸಮಸ್ಯೆ ಎನ್ನುವುದು ರೈತರಲ್ಲಿ, ದಲಿತರಲ್ಲಿ, ಬಡವರಲ್ಲಿ, ಆದಿವಾಸಿಗಲ್ಲಿ ವಿವಿಧ ಹಿಂದುಳಿದ ವರ್ಗಗಳಲ್ಲಿ ಹೀಗೆ ಎಲ್ಲರಲ್ಲೂ ಇವೆ. ಬಿಎಸ್‌ಪಿ ಕೇವಲ ದಲಿತ ಪಕ್ಷ ಎಂಬುದು ವಿರೋಧಿಗಳು ಹೇಳುವ ಮಾತಾಗಿದೆ. ಬಿಎಸ್‌ಪಿ ಶೇ.85 ಭಾಗ ಜನರನ್ನು ಪ್ರತಿನಿದಿಸುವ ಪಕ್ಷವಾಗಿದೆ. ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸಲು ಯುವಜನರಿಗೆ ರಾಜಕೀಯ ತಿಳಿವಳಿಕೆಯ ತರಬೇತಿಯನ್ನು ಸದ್ಯದಲ್ಲಿಯೇ ಆಯೋಜಿಸಲಿದ್ದೇವೆ ಎಂದರು.

ಸಭೆಯಲ್ಲಿ ರಾಜ್ಯಕಾರ್ಯದರ್ಶಿ ಭರತ್‌ಕುಮಾರ ಗೌಡ, ತಾಲೂಕು ಅಧ್ಯಕ್ಷ ಕೃಷ್ಣ, ಚಂದ್ರಶೇಖರ್ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net