

ಮೈಸೂರು: ಮಾನವ ದಿನವಿಡೀ ಕ್ರಿಯಶೀಲರಾಗಿ ಕೆಲಸ ನಿರ್ವಹಿಸಲು ಪ್ರತಿದಿನ ಯೋಗ ಮಾಡುವುದನ್ನು ರೂಢಿಸಿಕೊಳ್ಳುವುದು ಅನಿವಾರ್ಯ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ದಸರ ಮಹೋತ್ಸವದ ಅಂಗವಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಆಯೋಜಿಸಿದ್ದ ‘ಯೋಗಚರಣಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ನಮ್ಮನ್ನು ಕ್ರಿಯಾಶೀಲ ಹಾಗೂ ಆರೋಗ್ಯವಂತರಾಗಿ ಇರುವಂತೆ ಮಾಡುತ್ತದೆ. ಆದ್ದರಿಂದ ಯೋಗವನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಂಡರೆ ಚಟುವಟಿಕೆ, ಆರೋಗ್ಯದಿಂದ ಇರಲು ಸಹಕಾರಿ ಎಂದರು.
ಎಂದಿನಂತೆ ಈ ಬಾರಿಯೂ ಯೋಗ ಸಮಿತಿಯವರು ಅಚ್ಚುಕಟ್ಟಾಗಿ ಯೋಗ ಚಾರಣ ಹಮ್ಮಿಕೊಂಡು ಯಶ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯೋಗಸಮಿತಿ ಉಪಾಧ್ಯಕ್ಷೆ ರಮ್ಯಾ ಮಾತನಾಡಿ, ಪ್ರತಿದಿನ ಬೇಗನೆ ಎದ್ದು ಯೋಗಾಭ್ಯಾಸದೊಂದಿಗೆ ದಿನಚರಿಯನ್ನು ಪ್ರಾರಂಭಿಸುವುದರಿಂದ ಅದರ ಪರಿಣಾಮ ಸಾರ್ವಜನಿಕರ ಕೆಲಸ-ಕಾರ್ಯಗಳನ್ನು ಉತ್ಸಾಹದಿಂದ ಮಾಡಲು ನೆರವಾಗುತ್ತದೆ ಎಂದು ಹೇಳಿದರು.
ಸಮಿತಿಯ ಶಿವಕುಮಾರ್, ಮಹೇಶ್, ಚಿಕ್ಕಣ್ಣ, ಸರ್ವೇ ಪರಿವೇಕ್ಷಕರಾದ ನಾಗಾರಾಜು, ರಮೇಶ್, ಭೂಮಾಪಕರಾದ ಕೆ.ಬಿ.ನಾಗಭೂಷಣ್, ಗಿರೀಶ್ ಇತರರು ಇದ್ದರು.