ಪ್ರತಿ ಮನೆ ಮನೆಗೂ ಅಭಿವೃದ್ಧಿಯ ಬೆಳಕು ತಲುಪಲಿ: ಸಿಎಂಡಿ.ಕೆ.ಶಿವಕುಮಾರ್ ಆಶಯ

ನಂದಿ ಧ್ವಜ ಪೂಜೆ ಸಲ್ಲಿಸಿ ವಿಜಯದಶಮಿ ಮೆರವಣಿಗೆಗೆ ಚಾಲನೆ
ಪ್ರತಿ ಮನೆ ಮನೆಗೂ ಅಭಿವೃದ್ಧಿಯ ಬೆಳಕು ತಲುಪಲಿ: ಸಿಎಂಡಿ.ಕೆ.ಶಿವಕುಮಾರ್ ಆಶಯ
ಅರಮನೆಯ ಬಲರಾಮದ್ವಾರದಲ್ಲಿ ನಂದಿ ಧ್ವಜ ಪೂಜೆ ಸಲ್ಲಿಸಿ ವಿಜಯದಶಮಿ ಮೆರವಣಿಗೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಡಾ.ಯತೀಂದ್ರ ಸಿದ್ದರಾಮಯ್ಯ, ಶಿವರಾಜ ಎಸ್.ತಂಗಡಗಿ, ಬಾಲಕೃಷ್ಣ, ನರೇಂದ್ರಸ್ವಾಮಿ, ಉಮಾಶ್ರೀ, ತನ್ವೀರ್ ಸೇಠ್ ಇತರರಿದ್ದರು.Let the light of development reach every house: CMD.K.Sivakumar wish
Published on: 

ಮೈಸೂರು: ದಸರಾ ಸಂದರ್ಭದಲ್ಲಿ ದ್ವೇಷ ದೂರವಾಗಿ, ಸಾಮರಸ್ಯ ಬೆಳೆಯಬೇಕು. ಅಭಿವೃದ್ಧಿಯ ಬೆಳಕು ಪ್ರತಿ ಮನೆ ಮನೆಗೂ ತಲುಪಬೇಕು ಎಂಬುದು ನಮ್ಮ ಸಂಕಲ್ಪ. ಅನ್ಯಾಯ ಅಳಿಯಬೇಕು, ಸಮಾನತೆ ಬೆಳಗಬೇಕು. ಕಷ್ಟಗಳು ಕರಗಬೇಕು. ರೈತರು, ಯುವಕರ ಬದುಕು ಬೆಳಗಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಅರಮನೆ ಬಲರಾಮ ದ್ವಾರದಲ್ಲಿ ನಂದಿ ಧ್ವಜ ಪೂಜೆ ಸಲ್ಲಿಸಿ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.

ನಂದಿ ಪೂಜೆ ಮಾಡಿ ದಸರಾ ಜಂಬು ಸವಾರಿಗೆ ಚಾಲನೆ ನೀಡಿದ್ದೇವೆ. ಇದು ನನ್ನ ಬದುಕಿನ ಅಮೂಲ್ಯವಾದ ಕ್ಷಣ. ನಾಡಿನ ಪ್ರಜಾಸೇವಕನಾಗಿ, ನಾನು ನನ್ನ ಸಹೋದ್ಯೋಗಿಗಳು ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾಗಿದ್ದೇವೆ. ರಾಜ್ಯದ ಜನರ ಆಶೀರ್ವಾದಿಂದ ಶಕ್ತಿ ದೇವತೆ ಚಾಮುಂಡೇಶ್ವರಿ ಮೆರವಣಿಗೆಯಲ್ಲಿ ಸಾಕ್ಷಿಯಾಗುವ ಅವಕಾಶ ಸಿಕ್ಕಿದೆ. ಈ ಅವಕಾಶ ನೀಡಿದ ನಾಡಿನ ಜನತೆಗೆ ಶಾಂತಿ, ಸುಖ, ನೆಮ್ಮದಿ ಸಿಗಲಿ ಎಂದು ತಾಯಿ ಚಾಮುಂಡಿ ಪಾದಕ್ಕೆ ನಮಿಸಿ ಪ್ರಾರ್ಥಿಸುವೆ ಎಂದರು.

ಕೊಪ್ಪಳದ ಶ್ರೀಗಳು ದಸರಾಗೆ ಚಾಲನೆ ನೀಡಿ, ಶುಭ ಹಾರೈಸಿದ್ದಾರೆ. ರಾಜ್ಯದಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಬೇಕು ಎಂದು ತಾಯಿ ಚಾಮುಂಡಿ ಬಳಿ ಪ್ರಾರ್ಥಿಸಿದ್ದೇವೆ. ನಿತ್ಯ ಲಕ್ಷಾಂತರ ಜನ ಈ ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ. ತಾಯಿ ಆಶೀರ್ವಾದ ನಮ್ಮೆಲ್ಲರ ಶಕ್ತಿ, ಜನಸೇವೆಯೇ ನಮ್ಮ ಭಕ್ತಿ ಎಂದು ಹೇಳಿದರು.

ಇದು ಸರ್ಕಾರ ಅಥವಾ ರಾಜಮನೆತನಕ್ಕೆ ಸೇರಿದ ದಸರಾ ಮಾತ್ರವಲ್ಲ. ಪ್ರಜಾಪ್ರಭುತ್ವ ಬಂದ ಮೇಲೆ ಎಲ್ಲರ ಹಬ್ಬ. ರಾಜಮನೆತನಕ್ಕೆ ನೀಡಬೇಕಾದ ಗೌರವ ನೀಡಲಾಗುವುದು. ಕಲೆ ಸಾಹಿತ್ಯ, ಸಂಸ್ಕೃತಿಗೆ ಆದ್ಯತೆ ನೀಡಲಾಗಿದೆ. ಕನ್ನಡ ನಾಡಿನ ಅಭಿವೃದ್ಧಿಗೆ ಪಣ ತೊಟ್ಟಿದ್ದು, ನೆರೆ ರಾಜ್ಯದ ಮುಖ್ಯಮಂತ್ರಿಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಸಿನಿಮಾ ನಟರು, ದೇಶ ಕಾಯುವ ಯೋಧರು ಭಾಗವಹಿಸಿದ್ದಾರೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ರಾಜ್ಯದ ಎಲ್ಲ ಜನರ ಮೇಲಿರಲಿ, ಎಲ್ಲರ ಬದುಕು ಹಸನಾಗಲಿ ಎಂದು ರಾಜ್ಯದ ಪ್ರಜಾಸೇವಕನಾಗಿ ಶುಭಕೋರುತ್ತೇನೆ. ತಾಯಿ ಚಾಮುಂಡಿ ಹೊಸ ಆನೆ ಪ್ರಶಾಂತನ ಮೇಲೆ ಮೆರವಣಿಗೆ ಸಾಗಲಿದ್ದು, ಇನ್ನೂ ಹತ್ತಾರು ವರ್ಷಗಳ ಕಾಲ ಆ ತಾಯಿಯ ಮೆರವಣಿಗೆ ಮಾಡುವ ಭಾಗ್ಯ ಆ ಆನೆಗೆ ಸಿಗಲಿ ಎಂದು ಶುಭಕೋರಿದರು.

ನೆರೆ ರಾಜ್ಯಗಳ ನಡುವೆ ಸಾಮರಸ್ಯ:

ನೆರೆ ರಾಜ್ಯದ ಸಿಎಂಗಳ ಆಗಮನದಿಂದ ರಾಜ್ಯಗಳ ನಡುವಣ ಸಾಮರಸ್ಯ ವೃದ್ಧಿಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಇಎಂ

ಖಂಡಿತಾ ಸಾಮರಸ್ಯ ಮೂಡುತ್ತದೆ. ಇಲ್ಲಿ ತೆಲುಗು, ಮಲಯಾಳಂ, ತಮಿಳು ಮಾತನಾಡುವ ಜನರಿದ್ದಾರೆ. ಕಾವೇರಿ ನೀರು ಹರಿದು ಎಲ್ಲ ರಾಜ್ಯ ತಲುಪುತ್ತಿದೆ. ಈ ರಾಜ್ಯಗಳು ಸಹೋದರರಂತೆ ಸಾಮರಸ್ಯದಲ್ಲಿರಬೇಕು.

ನೆರೆ ರಾಜ್ಯಗಳ ಸ್ತಬ್ಧಚಿತ್ರಗಳು ಕೂಡ ಇಲ್ಲಿಗೆ ಬಂದಿವೆ. ನಮ್ಮ ರಾಜ್ಯ ವಿಶ್ವವನ್ನೇ ಆಕರ್ಷಿಸುತ್ತಿದ್ದು, ಬೆಂಗಳೂರಿನಲ್ಲಿ 45 ಲಕ್ಷ ಜನ ಹೊರ ರಾಜ್ಯದವರಾಗಿದ್ದಾರೆ. ನಾವು ಎಲ್ಲರನ್ನು ಸ್ವೀಕರಿಸುತ್ತಿದ್ದೇವೆ. ದಸರಾ ವಿಶ್ವವಿಖ್ಯಾತವಾಗಿದ್ದು, ವಿದೇಶದಿಂದಲೂ ಜನ, ವಿದೇಶಿ ರಾಯಭಾರಿಗಳ ಆಗಮನ ದಸರಾಕ್ಕೆ ಮೆರುಗು ತಂದುಕೊಟ್ಟಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net