ಪಂಚ ಗ್ಯಾರಂಟಿ ಪ್ರತಿ ಕುಟುಂಬಕ್ಕೂ ತಲುಪುವಂತೆ ನೋಡಿಕೊಳ್ಳಿ

Ensure Panch Guarantee reaches every family
ಸಾಲಿಗ್ರಾಮ ತಾಲೂಕಿನ ಮುಂಜನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅರಿವು ಕಾರ್ಯಕ್ರಮದಲ್ಲಿ ಸಮಿತಿಯ ತಾಲೂಕು ಅಧ್ಯಕ್ಷ ಉದಯ್ ಶಂಕರ್ ಮಾತನಾಡಿದರು. ವಾಸಿಂ ಪಾಷ, ಚಿಕ್ಕಹನಸೋಗೆ ಮೂರ್ತಿ, ಮಹದೇವನಾಯಕ, ಮಹಾಲಿಂಗಪ್ಪ, ಅನಿಲ್, ಮೋಹನ್, ನಂದೀಶ್, ಸ್ವಾಮಿ ನಾಯಕ ಇತರರಿದ್ದರು.

Published on

ಸಾಲಿಗ್ರಾಮ: ಪಂಚ ಯೋಜನೆಗಳು ಬಡಜನರ ಬದುಕನ್ನು ಕಟ್ಟುತಿವೆ ಹಾಗಾಗಿ ಪ್ರತಿಯೊಬ್ಬ ಕುಟುಂಬಕ್ಕೂ ಯೋಜನೆ ತಲುಪುವಂತೆ ಅಧಿಕಾರಿಗಳು ಎಚ್ಚರವಹಿಸಿ ಎಂದು ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಉದಯ್ ಶಂಕರ್ ತಿಳಿಸಿದರು.

ತಾಲೂಕಿನ ಮುಂಜನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪಂಚ ಯೋಜನೆ ಸೌಲಭ್ಯಗಳ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಂಜನಹಳ್ಳಿ ಗ್ರಾಮ ಪಂಚಾಯಿತಿಗೆ ಚಿಕ್ಕಭೇರ್ಯ, ಕಾವಲ್ ಹೊಸೂರು, ಗುಳುವಿನ ಹತ್ತಿಕುಪ್ಪೆ, ಉದಯಗಿರಿ, ಅರಕೆರೆ, ಮಂಜನಹಳ್ಳಿ, ಬಸವನಪುರ, ಗೇರದಡ, ಕೆಂಚನಹಳ್ಳಿ ಗ್ರಾಮಗಳು ಸೇರಲಿದ್ದು ಈ ವ್ಯಾಪ್ತಿಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಂದ ಯಾರೂ ವಂಚಿತರಾಗದಂತೆ ಅಧಿಕಾರಿಗಳು ಅರಿವು ಕಾರ್ಯಕ್ರಮದ ಮೂಲಕ ವಂಚಿತರಾಗಿರುವವರಿಗೆ ಸೌಲಭ್ಯಗಳ ಸದುಪಯೋಗ ಒದಗಿಸಿಕೊಡಬೇಕು ಎನ್ನುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಗ್ಯಾರಂಟಿ ಸಮಿತಿ ಸದಸ್ಯರಾದ ವಾಸಿಂ ಪಾಷ, ಚಿಕ್ಕಹನಸೋಗೆ ಮೂರ್ತಿ, ಮಹದೇವನಾಯಕ, ಮಹಾಲಿಂಗಪ್ಪ, ಅನಿಲ್, ಮೋಹನ್, ತಾಲೂಕು ಪಂಚಾಯಿತಿ ಯೋಜನಾಧಿಕಾರಿ ನಂದೀಶ್, ಪಿಡಿಒ ಸ್ವಾಮಿನಾಯಕ, ಕಾರ್ಯದರ್ಶಿ ರಮೇಶ ನಾಯಕ, ಗ್ರಾಮ ಲೆಕ್ಕಿಗ ರವೀಂದ್ರರಾವ್, ಹೊಸೂರು ಕಾಂತ, ಪ್ರಸಾದ್, ಹರೀಶ್, ವೆಂಕಟೇಶ್, ಬಸವರಾಜ್, ಶ್ರೀನಿವಾಸ್. ಶೇಖರ್, ಸಂಜು, ಮಂಜಯ್ಯ, ರವಿ, ಸಿಡಿಪಿಒ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net