ನಂಜನಗೂಡಿನ ವಿವಿಧೆಡೆ ಬರ ಅವಲೋಕನ

ರೈತರ ಜಮೀನುಗಳಲ್ಲಿ ಪರಿಶೀಲನೆ ನಡೆಸಿದ ಕೇಂದ್ರ ತಂಡ
ಕೇಂದ್ರ ಸರ್ಕಾರದಿಂದ ಬರ ಪರಿಸ್ಥಿತಿ ಅವಲೋಕಿಸಲು ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ಸೋಮವಾರ ತಾಲೂಕಿನ ವಿವಿಧೆಡೆ ಅಧ್ಯಯನ ನಡೆಸಿತು.
ಕೇಂದ್ರ ಸರ್ಕಾರದಿಂದ ಬರ ಪರಿಸ್ಥಿತಿ ಅವಲೋಕಿಸಲು ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ಸೋಮವಾರ ತಾಲೂಕಿನ ವಿವಿಧೆಡೆ ಅಧ್ಯಯನ ನಡೆಸಿತು.
Published on: 

ನಂಜನಗೂಡು: ಕೇಂದ್ರ ಸರ್ಕಾರದಿಂದ ಬರ ಪರಿಸ್ಥಿತಿ ಅವಲೋಕಿಸಲು ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ಸೋಮವಾರ ತಾಲೂಕಿನ ವಿವಿಧೆಡೆ ಅಧ್ಯಯನ ನಡೆಸಿತು.

ಮುಂಗಾರು, ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರೈತರು ಬೆಳೆ ಇಲ್ಲದೆ ನಷ್ಟ ಅನುಭವಿಸಿದ್ದು, ಕೇಂದ್ರದ ಮಾನದಂಡದಂತೆ ನಂಜನಗೂಡು ತಾಲೂಕನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಚಿನ್ನದಗುಡಿ ಹುಂಡಿ, ಬಸವಟ್ಟಿಗೆ, ನೆರಳೆ, ದೊಡ್ಡ ಕೌಲಂದೆ, ಚುಂಚನಹಳ್ಳಿ ಗ್ರಾಮಗಳ ರೈತರ ಜಮೀನುಗಳಲ್ಲಿ ಸಂಚರಿಸಿದ ಬರ ಅಧ್ಯಯನ ತಂಡದ ಮೂವರು ಸದಸ್ಯರು ವಸ್ತುಸ್ಥಿತಿ ವೀಕ್ಷಿಸಿ, ಸ್ಥಳೀಯ ಅಧಿಕಾತರಿಗಳಿಂದ ಅಗತ್ಯ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಐಶ್ವರ್ಯಾ ಜಂಟಿ ಕೃಷಿ ನಿರ್ದೇಶಕ ರವಿ, ಕೃಷಿ ಉಪನಿರ್ದೇಶಕ ರಾಜು, ಸಹಾಯಕ ಕೃಷಿ ನಿರ್ದೇಶಕ ರವಿ ಪಶುಪಾಲನಾ ಇಲಾಖೆ ಮೋಹನ್ ಸೇರಿದಂತೆ ಇತರರು ಇದ್ದರು.

ತಾಲೂಕಿನಲ್ಲಿ 21.959 ಹೆಕ್ಟೇರ್ ಭೂ ಪ್ರದೇಶದಲ್ಲಿ ರೈತರ ಬೆಳೆ ನಾಶವಾಗಿದ್ದು, 109 ಕೋಟಿ ರೂ. ರೈತರಿಗೆ ಬೆಳೆ ಪರಿಹಾರ ನೀಡಲು ಒತ್ತಾಯ ಕೇಳಿಬಂದಿದೆ. ಎನ್‌ಡಿಆರ್‌ಎಫ್ ತಂಡ 19 ಕೋಟಿ ರೂ.ಗೆ ಶಿಫಾರಸು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net