ದೊಡ್ಡಮ್ಮನ ಚಿನ್ನದ ಕಸಿದ ಯುವಕನ ಸೆರೆ

ಕಣ್ಣಿಗೆ ಕಾರದ ಪುಡಿ ಎರಚಿ ಸುಮಾರು 60 ಗ್ರಾಂ ತೂಕದ ಸರವನ್ನು ಕಿತ್ತುಕೊಳ್ಳಲು ಯತ್ನ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ
ದೊಡ್ಡಮ್ಮನ ಚಿನ್ನದ ಕಸಿದ ಯುವಕನ ಸೆರೆ
ಸರಗಳ್ಳತನ Youth who snatched elderly woman's gold chain arrested
Published on: 

ಮೈಸೂರು: ಟ್ರೇಡಿಂಗ್‌ನಲ್ಲಿ ಕಳೆದುಕೊಂಡ ಹಣವನ್ನು ಹೊಂದಿಸಲು ದೊಡ್ಡಮ್ಮನ ಮಾಂಗಲ್ಯ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಜತ್ ಬಂಧಿತ ಆರೋಪಿ. ಕುವೆಂಪುನಗರ 2ನೇ ಹಂತದ ಜ್ಯೋತಿ ಶಾಲೆ ಸಮೀಪದ ಮನೆಯಲ್ಲಿ ಲೀಲಾವತಿ ಒಬ್ಬರೇ ಇದ್ದರು.

ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಮನೆಗೆ ನುಗ್ಗಿದ ಆರೋಪಿ, ಕಣ್ಣಿಗೆ ಕಾರದ ಪುಡಿ ಎರಚಿ ಸುಮಾರು 60 ಗ್ರಾಂ ತೂಕದ ಸರವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಆಗ ಸರ ತುಂಡಾಗಿದ್ದು, ಅರ್ಧ ಭಾಗ ಆರೋಪಿಯ ಕೈ ಸೇರಿದೆ.

ಉಳಿದ ಭಾಗ ಲೀಲಾವತಿ ಅವರ ಬಳಿಯೇ ಉಳಿದಿದೆ.

ದೂರು ಸ್ವೀಕರಿಸಿದ ಪೊಲೀಸರು, ಘಟನಾ ಸ್ಥಳದಲ್ಲಿ ಲಭ್ಯವಾದ ಸುಳಿವು, ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಇದನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ತುಂಡಾದ ಸುಮಾರು 30 ಗ್ರಾಂ ಚಿನ್ನದ ಸರವನ್ನು ಜಪ್ತಿ ಮಾಡಲಾಗಿದೆ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.