

ಮೈಸೂರು: ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ವಿವಿಧ ನಿಲ್ದಾಣಗಳ ನಡುವೆ ಕೆಳಗಿನ ಹೆಚ್ಚುವರಿ ಕಾಯ್ದಿರಿಸದ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ.
ವಿಶೇಷ ರೈಲು(06285) ಅ.19, 20 ಮತ್ತು 21ರಂದು ಮಧ್ಯಾಹ್ನ 12.15 ಗಂಟೆಗೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಟು, 3.40ಕ್ಕೆ ಮೈಸೂರಿನ ಅಶೋಕಪುರಂ ತಲುಪಲಿದೆ.
ಮರುಪ್ರಯಾಣದಲ್ಲಿ ವಿಶೇಷ ರೈಲು(06286) ಅ.19, 20, 21ರಂದು ಸಂಜೆ 4.10 ಗಂಟೆಗೆ ಅಶೋಕಪುರಂನಿಂದ ಹೊರಟು, ಅದೇ ದಿನ ರಾತ್ರಿ 8ಕ್ಕೆ ಬೆಂಗಳೂರು ತಲುಪಲಿದೆ.
ಎಂಟು ಮೆಮು ಬೋಗಿ ಹೊಂದಿರುವ ಈ ರೈಲುಗಳು, ಎರಡೂ ಮಾರ್ಗಗಳಲ್ಲಿ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಎಲಿಯೂರು, ಬ್ಯಾಡರಹಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ, ನಾಗನಹಳ್ಳಿ, ಮೈಸೂರು, ಚಾಮರಾಜಪುರಂ ನಿಲ್ದಾಣಗಳಲ್ಲಿ ನಿಲ್ಲಲಿವೆ.
ವಿಶೇಷ ರೈಲು(06287) ಅ.16, 17, 18, 19, 20, 21ರಂದು ರಾತ್ರಿ 9.15ಕ್ಕೆ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯರಾತ್ರಿ 12.20 ಗಂಟೆಗೆ ಮೈಸೂರು ತಲುಪಲಿದೆ.
ಮರುಪ್ರಯಾಣದಲ್ಲಿ ವಿಶೇಷ ರೈಲು(06288) ಅ.17, 18, 19, 20, 21, 22ರಂದು ಮಧ್ಯರಾತ್ರಿ 12.30 ಗಂಟೆಗೆ ಮೈಸೂರಿನಿಂದ ಹೊರಟು, ಅದೇ ದಿನ ಬೆಳಗ್ಗೆ 3:30ಕ್ಕೆ ಬೆಂಗಳೂರು ಕೆಎಸ್‌ಆರ್ ನಿಲ್ದಾಣ ತಲುಪಲಿದೆ.
ಎಂಟು ಮೆಮು ಬೋಗಿ ಹೊಂದಿರುವ ಈ ವಿಶೇಷ ರೈಲುಗಳು, ಎರಡೂ ಮಾರ್ಗಗಳಲ್ಲಿ ಕೆಂಗೇರಿ, ಬಿಡದಿ, ರಾಮನಗರಂ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಪಾಂಡವಪುರ ನಿಲ್ದಾಣಗಳಲ್ಲಿ ನಿಲ್ಲಲಿವೆ. ರೈಲು ಸಂಖ್ಯೆ 06285/06286 ಮತ್ತು 06287/06288 ಎಂಟು ಮೆಮು ಕಾರ್ ಬೋಗಿ ಹೊಂದಿರಲಿವೆ.
ವಿಶೇಷ ರೈಲು(06297 ) ಅ.16, 17, 18, 19, 20, 21ರಂದು ರಾತ್ರಿ 11.15ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ ಬೆಳಗ್ಗೆ 2.50 ಗಂಟೆಗೆ ಕೆಎಸ್‌ಆರ್ ಬೆಂಗಳೂರು ತಲುಪಲಿದೆ.
ಮರುಪ್ರಯಾಣದಲ್ಲಿ ವಿಶೇಷ ರೈಲು(06298) ಅ.16, 17, 18, 19, 20, 21, 22ರಂದು ಬೆಳಗ್ಗೆ 3.15ಗಂಟೆಗೆ ಬೆಂಗಳೂರಿನಿಂದ ಹೊರಟು, ಅದೇ ದಿನ ಬೆಳಗ್ಗೆ 6.30ಕ್ಕೆ ಮೈಸೂರು ತಲುಪಲಿದೆ.
19 ಬೋಗಿ ಹೊಂದಿರುವ ಈ ರೈಲುಗಳು, ಎರಡೂ ಮಾರ್ಗಗಳಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ, ಬ್ಯಾಡರಹಳ್ಳಿ, ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಂ, ಬಿಡದಿ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ನಿಲ್ಲಲಿವೆ.
ವಿಶೇಷ ರೈಲು(06293) ಅ.2ರಂದು ರಾತ್ರಿ 9.30ಗಂಟೆಗೆ ಮೈಸೂರಿನಿಂದ ಹೊರಟು, ಅದೇ ದಿನ ರಾತ್ರಿ 11.20ಗಂಟೆಗೆ ಚಾಮರಾಜನಗರ ತಲುಪಲಿದೆ. ಮರುಪ್ರಯಾಣದಲ್ಲಿ ವಿಶೇಷ ರೈಲು(06294) ಅ.21.ರಂದು ರಾತ್ರಿ 11.50ಗಂಟೆಗೆ ಚಾಮರಾಜನಗರದಿಂದ ಹೊರಟು, ಮರುದಿನ ಬೆಳಗ್ಗೆ 1.50ಗಂಟೆಗೆ ಮೈಸೂರು ತಲುಪಲಿದೆ.
20 ಬೋಗಿ ಹೊಂದಿರುವ ಈ ವಿಶೇಷ ರೈಲುಗಳು, ಎರಡೂ ಮಾರ್ಗಗಳಲ್ಲಿ ಚಾಮರಾಜಪುರಂ, ಅಶೋಕಪುರಂ, ಕಡಕೊಳ, ತಾಂಡವಪುರ, ಸುಜಾತಾಪುರ, ನಂಜನಗೂಡು, ಚಿನ್ನದಗುಡಿಹುಂಡಿ, ನರಸಾಂಬುಧಿ, ಕವಲಂದೆ, ಕೊಣನೂರು, ಬದನಗುಪ್ಪೆ, ಮರಿಯಾಲ ಗಂಗವಾಡಿ ನಿಲ್ದಾಣಗಳಲ್ಲಿ ನಿಲ್ಲಲಿವೆ.
ವಿಶೇಷ ರೈಲು ಅ.21ರಂದು ಮಧ್ಯರಾತ್ರಿ 12.10 ಗಂಟೆಗೆ ಮೈಸೂರಿನಿಂದ ಹೊರಟು, ಅದೇ ದಿನ ಬೆಳಗ್ಗೆ 2ಗಂಟೆಗೆ ಚಾಮರಾಜನಗರ ತಲುಪಲಿದೆ.
ಮರುಪ್ರಯಾಣದಲ್ಲಿ ವಿಶೇಷ ರೈಲು(06290) ಅ.21ರಂದು ಮಧ್ಯಾಹ್ನ 2.30ಗಂಟೆಗೆ ಚಾಮರಾಜನಗರದಿಂದ ಹೊರಟು, ಅದೇ ದಿನ ಸಂಜೆ 4.15 ಗಂಟೆಗೆ ಮೈಸೂರು ತಲುಪಲಿದೆ.
19 ಬೋಗಿ ಹೊಂದಿರುವ ಈ ರೈಲುಗಳು, ಎರಡೂ ಮಾರ್ಗಗಳಲ್ಲಿ ಚಾಮರಾಜಪುರಂ, ಅಶೋಕಪುರಂ, ಕಡಕೊಳ, ತಾಂಡವಪುರ, ಸುಜಾತಾಪುರ, ನಂಜನಗೂಡು, ಚಿನ್ನದಗುಡಿಹುಂಡಿ, ನರಸಾಂಬುಧಿ, ಕವಲಂದೆ, ಕೊಣನೂರು, ಬದನಗುಪ್ಪೆ, ಮರಿಯಾಲ ಗಂಗವಾಡಿ ನಿಲ್ದಾಣಗಳಲ್ಲಿ ನಿಲ್ಲಲಿವೆ.