ಚಿತ್ರ ಕಲಾವಿದ ಬಿ.ಎಸ್.ದೇಸಾಯಿಗೆ ಲಲಿತಕಲಾ ಅಕಾಡೆಮಿ ಗೌರವ

ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ಮಾಹಿತಿ
Lalit Kala Akademi Honor for Artist B.S. Desai
ಬಿ.ಎಸ್. ದೇಸಾಯಿ
Published on: 

ಹಾಸನ: ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿಗೆ ಹಾಸನದ ಹಿರಿಯ ಚಿತ್ರ ಕಲಾವಿದ ಬಿ.ಎಸ್. ದೇಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್ ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಅ.30ರಂದು ಗದಗಿನ ಜಗದ್ಗುರು ಶ್ರೀ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ಬಿ.ಎಸ್.ದೇಸಾಯಿ ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಿತ್ರಕಲಾ ಕ್ಷೇತ್ರದಲ್ಲಿ ಬಿ.ಎಸ್.ದೇಸಾಯಿ ಅವರು ಸೃಜನಶೀಲ ಕಲಾವಿದರಾಗಿ ಅಮೂರ್ತದಿಂದ ಮೂರ್ತದ ಪಯಣ ಮತ್ತು ಮೂರ್ತದಿಂದ ಅಮೂರ್ತದ ಪಯಣ ವಿಷಯದ ಸೃಜನಶೀಲ ಕಲಾ ಕೃತಿಗಳ ಮುಖಾಂತರ ರಾಜ್ಯ, ಹೊರ ರಾಜ್ಯಗಳಲ್ಲಿ ಹಾಗೂ ಅಂತಾರಾಷ್ಟ್ರೀ ಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ. ಚಿತ್ರಕಲಾ ಶಿಕ್ಷಕ, ಕಲಾವಿದ, ಪಕ್ಷಿ ಛಾಯಾಗ್ರಾಹಕರಾಗಿ, ಪರಿಸರ ಜಾಗೃತಿಗಾಗಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ ರಾಜ್ಯದ ಬಹುತೇಕ ಕಡೆ ವೇಗದ ವಿಸ್ಮಯದ ದೊಡ್ಡದಾದ ಕಲಾ ಕೃತಿಗಳನ್ನು ರಚಿಸುತ್ತಾ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದು ಜನಪ್ರಿಯತೆಯನ್ನು ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net