ಕೊಲೆ ಅಪರಾಧಿಗೆ ಜೀವಾವಧಿ ಶಿಕ್ಷೆ, ಒಂದು ಲಕ್ಷ ರೂ. ದಂಡ

ಬಾರ್ ಸಪ್ಲೈಯರ್ ಕೊಲೆ ಪ್ರಕರಣ
Court Order
Life imprisonment and a fine of ₹1 lakh for the murderer
Published on: 

ಮೈಸೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಪ್ಲೈಯರ್‌ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಅಪರಾಧಿಗೆ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ.

ನಗರದ ಮಹದೇವಪುರದ ಪ್ರಕೃತಿ ಬಡಾವಣೆಯ ನಿವಾಸಿ ಸುಧಾಕರ್ ಅಲಿಯಾಸ್ ಸುಧಿ (31) ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಶ್ರೀರಾಂಪುರ ಬಡಾವಣೆಯ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ನಂದನ್‌ಕುಮಾರ್‌ನನ್ನು ಕೊಲೆ ಮಾಡಿದ್ದ.

ಕುಡಿತದ ದಾಸನಾಗಿದ್ದ ಸುಧಾಕರ್, ಆಗಾಗ್ಗೆ ನಂದನ್‌ಕುಮಾರ್ ಜತೆ ಜಗಳ ಮಾಡಿ ದ್ವೇಷ ಸಾಧಿಸುತ್ತಿದ್ದನೆನ್ನಲಾಗಿದೆ. 2022ರ ಜುಲೈ 20ರಂದು ಸಂಜೆ ಬಾರ್‌ನಲ್ಲಿ ಕುಡಿದ ಬಳಿಕ ಬಿಲ್ ಕೊಡುವ ವಿಷಯಕ್ಕೆ ಜಗಳ ತೆಗೆದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಈ ಬಗ್ಗೆ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಗರದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶ ವಿ.ಎಚ್.ದಯಾನಂದ ಅವರು, ಸಾಕ್ಷಾೃಧಾರದಿಂದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದು, ದಂಡದ ಮೊತ್ತವನ್ನು ಮೃತ ನಂದನ್‌ಕುಮಾರ್ ತಾಯಿಗೆ ನೀಡುವಂತೆ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಎನ್.ಬಿ.ವಿಜಯಲಕ್ಷ್ಮಿ ವಕಾಲತ್ತು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net