ಕೊಟ್ಟಿಗೆಗೆ ಬೆಂಕಿ ಬಿದ್ದು ನಾಲ್ಕು ಹಸುಗಳಿಗೆ ಗಾಯ

ಜಾನುವಾರುಗಳು ಪ್ರಾಣಾಪಾಯದಿಂದ ಪಾರು
ಕೊಟ್ಟಿಗೆಗೆ
ಕೊಟ್ಟಿಗೆಗೆ
Published on: 

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಗಂಗನಕಪ್ಪೆ ಗ್ರಾಮದಲ್ಲಿ ರೈತ ಗೋಪಾಲಯ್ಯ ಕೊಟ್ಟಿಗೆಗೆ ಮಂಗಳವಾರ ರಾತ್ರಿ ಬೆಂಕಿ ತಗುಲಿ, ನಾಲ್ಕು ಹಸುಗಳು ಗಾಯಗೊಂಡಿವೆ.

ಮನೆಯ ಹಿಂಭಾಗದಲ್ಲಿರುವ ಕೊಟ್ಟಿಗೆಯಲ್ಲಿ ಹಸುಗಳನ್ನು ಕಟ್ಟಿಹಾಕಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಧಾವಿಸಿ ಬೆಂಕಿ ನಂದಿಸಿದರು. ಬಳಿಕ ಗಾಯಗೊಂಡ ಹಸುಗಳಿಗೆ ತಕ್ಷಣ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಅದೃಷ್ಟವಶಾತ್ ಎಲ್ಲ ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net